ಬೆಂಗಳೂರು(ಮೇ 13)  ಲಾಕ್ ಡೌನ್ ಸಡಿಲವಾಗಿದೆ ಎಂದು ಬೆಂಗಳೂರಿನ ಕಡೆ ದಾರಿ ಹಿಡಿದವರು ಈ ಸುದ್ದಿ ಓದಲೇಬೇಕು.  ಬೆಂಗಳೂರಿಗೆ ಬರುವವರೆ ಎಚ್ಚರ ಎಚ್ಚರ... ಲಾಕ್ ಡೌನ್ ಫ್ರೀ ಇದೆ ಸಿಟಿ ಕಡೆ ಹೊರ್ಟಿದ್ರೆ ನೋಡಿ ಹೆಜ್ಜೆ ಇಡಿ.

ಸಿಟಿಗೆ ಎಂಟ್ರಿ ಯಾಗೋ ಹೈವೆಯಲ್ಲಿ ಪೊಲೀಸರಯ ಹೈ ಸೆಕ್ಯೂರಿಟಿ ಅಳವಡಿಕೆ ಮಾಡಿದ್ದಾರೆ.  ಪಾಸ್ ಇದ್ದಾವರಿಗೆ ಮಾತ್ರ ಎಂಟ್ರಿ. ಪಾಸ್ ಇಲ್ಲದೇ ಬಂದರೆ ಬಂದ ದಾರಿಗೆ ಸುಂಕ ಇಲ್ಲ ಎಂದು ಹಿಂದಕ್ಕೆ  ಹೋಗಬೇಕು .

ವೈರಾಣು ಹಬ್ಬಿದ ರೀತಿ ಕಂಡುಹಿಡಿಯಲು ಹೊಸ ಯತ್ನ

ಪಾಸ್ ಇದ್ರೂ ಕಾರ್ ನಲ್ಲಿ 1+1 ಬೈಕ್ ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶ ಇದೆ.  ಸಿಟಿಗೆ ಎಂಟ್ರಿ ಕೊಡೋರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.  ದಾಬಸ್ ಪೇಟೆ ಪೊಲೀಸರು ಕಡ್ಡಾಯ ಪರಿಶೀಲನೆಗೆ ಸವಾರರನ್ನು ಒಳಪಡಿಸುತ್ತಿದ್ದಾರೆ.  ಪಿಎಸ್  ಐ. ವಸಂತ್  ಪ್ರತಿ ವಾಹನ ಚೆಕ್ ಮಾಡಿ ವರದಿ ಪಡೆದುಕೊಳ್ಳುತ್ತಿದ್ದಾರೆ. 

ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ ಎಂದಿದ್ದರೂ ಅವರ ಅವರ ಎಚ್ಚರಿಕೆಯನ್ನು ಅವರವರೇ ವಹಿಸಿಕೊಳ್ಳಬೇಕು . ಮಾಸ್ಕ್ ಸೇರಿದಂತೆ ಲಾಕ್ ಡೌನ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.