8 ದಿನದಲ್ಲಿ 160 ಮಕ್ಕಳಿಗೆ ಕೊರೋನಾ ಸೋಂಕು: ಹೆಚ್ಚಿದ ಆತಂಕ

ಕಳೆದ 2 ದಿನದಿಂದ 30ಕ್ಕೂ ಹೆಚ್ಚು ಮಕ್ಕಳಲ್ಲಿ ವೈರಸ್‌ ಪತ್ತೆ| 10 ವರ್ಷದ ಮಕ್ಕಳಲ್ಲಿ ಕೊರೋನಾ|ಪೋಷಕರಲ್ಲಿ ಹೆಚ್ಚಿನ ಆತಂಕ| ಯಲಹಂಕ ವಲಯದಲ್ಲಿ ಹೆಚ್ಚು ಕ್ಲಸ್ಟರ್‌ ಪ್ರಕರಣ| 

Coronavirus infection in 160 children in 8 days in Bengaluru grg

ಬೆಂಗಳೂರು(ಮಾ.21): ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗಿವೆ. ಕಳೆದ ಎಂಟು ದಿನಗಳಲ್ಲಿ 10 ವರ್ಷದೊಳಗಿನ 160 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ನಗರದಲ್ಲಿ ಭಾನುವಾರ 1039 ಹೊಸ ಪ್ರಕರಣ ಪತ್ತೆಯಾಗಿದೆ. ಈ ಪೈಕಿ 32 ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಮಕ್ಕಳಲ್ಲಿ ಸೋಂಕು ಕ್ರಮೇಣ ಹೆಚ್ಚುತ್ತಿದೆ. ಮಾ.14 ರಂದು 17, ಮಾ.15ಕ್ಕೆ 16, ಮಾ.16ಕ್ಕೆ 12, ಮಾ.17ಕ್ಕೆ 20, ಮಾ.18ಕ್ಕೆ 20, ಮಾ.19ಕ್ಕೆ 10, ಮಾ.20ಕ್ಕೆ 33 ಹಾಗೂ ಮಾ.21ಕ್ಕೆ 32 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಕ್ಕಳೆಲ್ಲಾ 10 ವರ್ಷದೊಳಗಿನವರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಭಾನುವಾರ 1,039 ಹೊಸ ಪ್ರಕರಣದೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 4,17,672ಕ್ಕೆ ಏರಿಕೆಯಾಗಿದೆ. ಅಂತೆಯೆ ಭಾನುವಾರ ಒಂದೇ ದಿನ 782 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,03,822ಕ್ಕೆ ಏರಿಕೆಯಾಗಿದೆ. ಒಂದು ಸಾವು ಪ್ರಕರಣ ವರದಿಯಾಗಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,549ಕ್ಕೆ ಏರಿಕೆಯಾಗಿದೆ. ಆತಂಕ ವಿಚಾರವೆಂದರೆ, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,300 ತಲುಪಿದೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳುತ್ತಿರುವ 46 ಮಂದಿಗೆ ಸೋಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ

ಯಲಹಂಕ ವಲಯದಲ್ಲಿ ಹೆಚ್ಚು ಕ್ಲಸ್ಟರ್‌ ಪ್ರಕರಣ

ಪಾಲಿಕೆಯ ಯಲಹಂಕ ವಲಯದಲ್ಲಿ ಒಂದೇ ಕಡೆ ಐದಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾಗಿರುವ ಕ್ಲಸ್ಟರ್‌ ಪ್ರಕರಣಗಳು ಹೆಚ್ಚಿವೆ. ಐದು ಕ್ಲಸ್ಟರ್‌ಗಳಲ್ಲಿ 33 ಪ್ರಕರಣ, ದಾಸರಹಳ್ಳಿ ವಲಯದಲ್ಲಿ 4 ಕ್ಲಸ್ಟರ್‌ಗಳಲ್ಲಿ 29 ಸೋಂಕು ಪ್ರಕರಣ, ಪಶ್ಚಿಮ ವಲಯದ 3 ಕ್ಲಸ್ಟರ್‌ಗಳಲ್ಲಿ 29 ಸೋಂಕು ಪ್ರಕರಣ, ಪೂರ್ವ ವಲಯದ 2 ಕ್ಲಸ್ಟರ್‌ಗಳಲ್ಲಿ 12 ಪ್ರಕರಣ ಹಾಗೂ ದಕ್ಷಿಣ ವಲಯದಲ್ಲಿ ಒಂದು ಕ್ಲಸ್ಟರ್‌ನಲ್ಲಿ 8 ಸಕ್ರಿಯ ಪ್ರಕರಣಗಳಿವೆ.

70 ವರ್ಷ ಮೀರಿದವರೇ ಹೆಚ್ಚು ಸೋಂಕಿಗೆ ಬಲಿ

ನಗರದಲ್ಲಿ ಇದುವರೆಗೂ ಒಟ್ಟು 4549 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಪೈಕಿ 70 ದಾಟಿದವರೇ 1,474 ಮಂದಿ ಇದ್ದಾರೆ. ಅಂತೆಯೆ 60 ವರ್ಷ ಮೀರಿದ 1,222 ಮಂದಿ, 50 ವರ್ಷ ದಾಟಿದ 981 ಮಂದಿ, 40 ವರ್ಷ ದಾಟಿದ 499 ಮಂದಿ, 30 ವರ್ಷ ಮೀರಿದ 218 ಮಂದಿ, 20 ವರ್ಷ ದಾಟಿದ 89 ಮಂದಿ, 10 ವರ್ಷ ದಾಟಿದ 18 ಮಂದಿ ಹಾಗೂ 9 ವರ್ಷದೊಳಗಿನ 10 ಮಕ್ಕಳು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
 

Latest Videos
Follow Us:
Download App:
  • android
  • ios