ಹಾವೇರಿ: 9 ತಿಂಗಳ ಮಗುವಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ
ಹಾವೇರಿ ಜಿಲ್ಲೆಯಲ್ಲಿ 56ಕ್ಕೇರಿದ ಕೋವಿಡ್ ಪ್ರಕರಣ|9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢ| 9 ತಿಂಗಳು ಗಂಡು ಮಗು ತನ್ನ ತಂದೆ-ತಾಯಿಯೊಂದಿಗೆ ಸವಣೂರ ಪಟ್ಟಣದ ಖಾದರಭಾಗ ಓಣಿಯಲ್ಲಿ ವಾಸ| ಸೋಂಕಿತ ಗರ್ಭಿಣಿ (ಪಿ-8699) ಕಾರಣದಿಂದ ಈ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಣೆ|
ಹಾವೇರಿ(ಜೂ.28): ಜಿಲ್ಲೆಯಲ್ಲಿ ಶನಿವಾರ 9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ 56 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 31 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಪ್ರವಾಸ ಹಿನ್ನೆಲೆ:
9 ತಿಂಗಳು ಗಂಡು ಮಗು ತನ್ನ ತಂದೆ-ತಾಯಿಯೊಂದಿಗೆ ಸವಣೂರ ಪಟ್ಟಣದ ಖಾದರಭಾಗ ಓಣಿಯಲ್ಲಿ ವಾಸವಾಗಿದೆ. ಈಗಾಗಲೇ ಸೋಂಕಿತ ಗರ್ಭಿಣಿ (ಪಿ-8699) ಕಾರಣದಿಂದ ಈ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಹಿರೇಕೆರೂರು: ಕೊರೋನಾ ಭೀತಿ, ಬಸ್‌ಗಳಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್
ಜೂ. 23ರಂದು ಕಂಟೈನ್‌ಮೆಂಟ್ ಜೋನ್‌ನಲ್ಲಿ ಆರೋಗ್ಯ ತಪಾಸಣೆ ವೇಳೆ ಮಗುವಿನ ಗಂಟಲು ದ್ರವದ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ. 27ರಂದು ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿದೆ. ಕೂಡಲೇ ಮಗುವನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.