ಯಾದಗಿರಿ(ಜು.09): ಮದುವೆಗೆ ನಾಲ್ಕೇ ದಿನಗಳಿದ್ದ ಸಂದರ್ಭದಲ್ಲಿ ಮದು ಮಗನಿಗೆ ಕೊರೋನಾ ಸೋಂಕು ತಗುಲಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಜುಲೈ 13ಕ್ಕೆ ಯುವಕನ ಮದುವೆ ನಿಗದಿಯಾಗಿತ್ತು. ಬೆಂಗಳೂರಿನಿಂದ ಜೂ.29 ರಂದು ಆತ ವಾಪಸ್ಸಾಗಿದ್ದ. ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಈತನನ್ನು ಕೋವಿಡ್‌-19 ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪಾಸಿಟಿವ್‌ ಬಂದಿದೆ. 

ಅಯ್ಯಯ್ಯೋ.. ಶಾಲೆಯೊಳಗೇ ಟೀಚರ್ ಎಣ್ಣೆ ಪಾರ್ಟಿ..!

ಮದುವೆ ಮನೆಯಲ್ಲಿ ಇದೀಗ ಆತಂಕ ಮೂಡಿದ್ದು, ಮದುವೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.