Asianet Suvarna News Asianet Suvarna News

ಬೆಳ​ಗಾವಿ: ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದ 13 ಮಂದಿಗೆ ಕೊರೋನಾ ದೃಢ

22 ರ ಪೈಕಿ 20 ಆರೋಪಿಗಳಿಗೆ ಕೊವೀಡ್‌ ಪರೀಕ್ಷೆ| 13 ಜನರಿಗೆ ಕೋವಿಡ್‌ ಸೋಂಕು ದೃಢ| ​ಬಿಮ್ಸ್‌ ಆಸ್ಪ​ತ್ರೆ​ಯಲ್ಲಿ ದಾಂಧಲೆ ನಡೆ​ಸಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾನು​ವಾರ ಏಳು ಹಾಗೂ ಶನಿ​ವಾರ ಓರ್ವ ಸೇರಿ ಎಂಟು ಜನ ಆರೋ​ಪಿ​ಗ​ಳನ್ನು ಎಪಿ​ಎಂಪಿ ಠಾಣೆ ಪೊಲೀ​ಸರು ಬಂಧಿ​ಸಿ​ದ್ದರು|

Coronavirus Infected to 13 People of Ambulance Fire Case
Author
Bengaluru, First Published Jul 27, 2020, 12:33 PM IST

ಬೆಳ​ಗಾವಿ(ಜು.27):  ನಗರದ ಜಿಲ್ಲಾಸ್ಪತ್ರೆ (ಬಿಮ್ಸ್‌) ಆವರಣದಲ್ಲಿ ಜು.21ರಂದು ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಹಾಗೂ ಕಲ್ಲು ತೂರಾಟ ಮಾಡಿ ದಾಂಧಲೆ ನಡೆ​ಸಿದ ಪ್ರಕ​ರ​ಣಕ್ಕೆ ಸಂಬಂಧಿಸಿದಂತೆ ಬಂಧಿ​ತ​ರಾದ 22 ಆರೋ​ಪಿ​ಗ​ಳ ಪೈಕಿ 13 ಜನಕ್ಕೆ ಕೊರೋನಾ ಸೋಂಕು ಪತ್ತೆ​ಯಾ​ಗಿದೆ. 

22 ರ ಪೈಕಿ 20 ಆರೋಪಿಗಳನ್ನು ಕೊವೀಡ್‌ ಪರೀಕ್ಷೆಗೊಳಪಡಿಸಲಾ​ಗಿತ್ತು. ಇದ​ರಲ್ಲಿ 13 ಜನರಿಗೆ ಭಾನು​ವಾರ ಸೋಂಕು ದೃಢ​ಪ​ಟ್ಟಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಕೊವೀಡ್‌ ಪರೀಕ್ಷೆಗೊಳಪಡಿಸುವುದು ಬಾಕಿ ಇದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ: ಕೊರೋನಾ ಸೋಂಕಿತ ಸಾವು, ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ

ರೋಗಿ ಸಾವಿಗೆ ವೈದ್ಯರೇ ಕಾರಣ ಎಂದು ಬಿಮ್ಸ್‌ ಆಸ್ಪ​ತ್ರೆ​ಯಲ್ಲಿ ದಾಂಧಲೆ ನಡೆ​ಸಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾನು​ವಾರ ಏಳು ಹಾಗೂ ಶನಿ​ವಾರ ಓರ್ವ ಸೇರಿ ಎಂಟು ಜನ ಆರೋ​ಪಿ​ಗ​ಳನ್ನು ಎಪಿ​ಎಂಪಿ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾರೆ. ಘಟ​ನೆ ನಡೆದ ಮರು​ದಿ​ನವೇ ಪೊಲೀ​ಸರು 14 ಜನ ಆರೋ​ಪಿ​ಗ​ಳನ್ನು ಬಂಧಿ​ಸಿ​ದ್ದರು. ಇದ​ರೊಂದಿಗೆ ಬಂಧಿತ ಆರೋ​ಪಿ​ಗಳ ಸಂಖ್ಯೆ ಒಟ್ಟು 22ಕ್ಕೆ ಏರಿಕೆಯಾಗಿದೆ.
 

Follow Us:
Download App:
  • android
  • ios