ಬೆಂಗಳೂರು [ಮಾ.14]: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಗೂ ಇದೀಗ ಕೊರೋನಾ ಎಫೆಕ್ಟ್ ತಟ್ಟಿದೆ. 

ಇನ್ಫೋಸಿಸ್ ಓರ್ವ ಉದ್ಯೋಗಿ ಕೊರೋನಾ ತಗುಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣ ಶಂಕೆ ಆಧಾರದ ಮೇಲೆ ಕಟ್ಟದಿಂದ ಉದ್ಯೋಗಿಗಳನ್ನು ತೆರವುಗೊಳಿಸಲಾಗಿದೆ. 

ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದಲ್ಲಿದ್ದ ಉದ್ಯೋಗಿಗಳನ್ನು ಕಳುಹಿಸಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ. 

ಕೊರೋನಾವೈರಸ್‌ ತಡೆ: ಸರ್ಕಾರದಿಂದ 4 ಮಹತ್ವದ ಸೂಚನೆ

ಇನ್ಫೋಸಿಸ್ ಆವರಣದ ಐಐಪಿಎಂ ಕಟ್ಟಡದಲ್ಲಿ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳೂತ್ತಿರುವುದಾಗಿ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗಿದೆ. 

ಇದಕ್ಕೆ ಎಲ್ಲರೂ ಸಹಕರಿಸಿ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಲಾಗಿದೆ ಎಂದು  ಬೆಂಗಳೂರಿನ ಡೆವಲಪ್ಮೆಂಟ್ ಸೆಂಟರಿನ ಮುಖ್ಯಸ್ಥ ಗುರುರಾಜ್ ದೇಶಪಾಂಡೆ ಇಮೇಲ್  ತಿಳಿಸಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"