ಕೆಜಿ ಕೋಳಿಗೆ 8 ರು.! : ಸಾವಿರಾರು ಕೋಳಿಗಳ ಜೀವಂತ ಸಮಾಧಿ !
ವಿಶ್ವದಾದ್ಯಂತ ಕೊರೋನಾಸುರನ ಅಬ್ಬರ ಹೆಚ್ಚಾಗಿದ್ದು, ಇದರ ಹಾವಳಿ ಕೋಳಿ ಉದ್ಯಮದ ಮೇಲೂ ತಟ್ಟಿದೆ.
ಶಿವಮೊಗ್ಗ [ಮಾ.11]: ವಿಶ್ವಾದ್ಯಂತ ಕೊರೊನಾ ಭೀತಿ ಕೋಳಿ ಉದ್ಯಮಕ್ಕೂ ತಟ್ಟಿದೆ. ಕೋಳಿ ಮಾರಾಟ ದರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ದರ ಕುಸಿತದಿಂದ ಕಂಗಲಾದ ಕೋಳಿ ಸಾಕಾಣಿಕೆದಾರರು ಭಾರಿ ನಷ್ಟ ಅನುಭವಿಸಬೇಕಾಗಿದೆ. ಇದರಿಂದಾಗಿ ಕೋಳಿ ಫಾರಂನಲ್ಲಿ ಸಾಕಿದ ಕೋಳಿಗಳನ್ನು ಸಾಕಾಣಿಕೆದಾರರೇ ಜೀವಂತವಾಗಿ ಸಮಾಧಿ ಮಾಡುತ್ತಿದ್ದಾರೆ.
ಶಿವಮೊಗ್ಗ ತಾಲೂಕು ಸಂತೆ ಕಡೂರು ಬಳಿಯ ಪಡಾರಿ ಕ್ಯಾಂಪ್ನಲ್ಲಿರುವ ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ತಮ್ಮಲ್ಲಿರುವ ಸುಮಾರು 4 ಸಾವಿರ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಇವರ ಬಳಿ ಇದ್ದ 22 ದಿನದ ಕೋಳಿಗಳನ್ನು ಗುಂಡಿ ತೆಗೆದು ಮಣ್ಣಿನಲ್ಲಿ ಮುಚ್ಚುದ್ದಾರೆ.
1 ಕೆಜಿ ಕೋಳಿ ಮಾಂಸಕ್ಕೆ 35 ರು.! : ಭಾರೀ ಇಳಿಕೆ.
ಮಾಂಸ ವಹಿವಾಟಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೋಳಿಗೆ 8 ರು. ದರವಿದ್ದು, ಇದರ ಅಂದಾಜಿನ ಪ್ರಕಾರ 3 ಲಕ್ಷ ರು. ನಷ್ಟ ಅನುಭವಿಸಿದ್ದಾರೆ. ಕೋಳಿಗಳನ್ನು ತಮ್ಮ ಬಳಿಯೇ ಇರಿಸಿಕೊಂಡು ಇನ್ನಷ್ಟು ನಷ್ಟ ೆದುರಿಸುವ ಬದಲು ಈಗಲೇ ತೆರವುಗೊಳಿಸಿದ್ದಾಗಿ ಹೇಳಿದ್ದಾರೆ.