Asianet Suvarna News Asianet Suvarna News

1 ಕೆಜಿ ಕೋಳಿ ಮಾಂಸಕ್ಕೆ 35 ರು.! : ಭಾರೀ ಇಳಿಕೆ

ದೇಶದಲ್ಲಿ ಕುಕ್ಕುಟೋದ್ಯಮ ಭಾರೀ ನಷ್ಟ ಎದುರಿಸುವಂತಾಗಿದೆ. ಚಿಕನ್ ದರ ಅತ್ಯಂತ ಕಡಿಮೆಯಾಗಿದ್ದು, ಕೆಜಿ.35 ರು.ಗೆ ಇಳಿದಿದೆ. 

Chicken prices falls poultry industry affected Due To Coronavirus
Author
Bengaluru, First Published Mar 11, 2020, 1:28 PM IST

ಬೆಂಗಳೂರು [ಮಾ.11] : ಮಾರಕ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದ್ದು, ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿದೆ. 

ಇದೀಗ ಕೊರೋನಾ ಎಫೆಕ್ಟ್ ಕಕ್ಕುಟೋದ್ಯಮದ ಮೇಲೂ ಬಿದ್ದಿದೆ. ಬೆಂಗಳೂರಿನಲ್ಲಿ ಕೋಳಿ ಮಾಂಸದ ಬೆಲೆ ಭಾರೀ ಇಳಿಕೆಯಾಗಿದೆ. 

ಒಂದು ಕೆಜಿ ಚಿಕನ್ ಬೆಲೆ 100 ರು. ಅಧಿಕವಿತ್ತು. ಆದರೆ ಕೊರೋನಾ ಹಾವಳಿ ಹೆಚ್ಚಾದ ಮೇಲೆ ಕೇವಲ 35 ರು.ಗೆ ಇಳಿಕೆಯಾಗಿದೆ. 

ಕೊರೊನಾ ಭೀತಿ : 9,500 ಕೋಳಿ ಜೀವಂತ ಸಮಾಧಿ...

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೋಳಿ ಮಾಂಸದ ಬೆಲೆ ಅತ್ಯಂತ ಕಡಿಮೆಯಾಗಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. 

ಈಗಾಗಲೇ ರಾಜ್ಯದ ಹಲವು ಪ್ರದೇಶಗಳಲ್ಲಿ  ಜೀವಂತವಾಗಿ ಸಾವಿರಾರು ಸಂಖ್ಯೆಯಲ್ಲಿ ಕೋಳಿಗಳ ಮಾರಣಹೋಮ ಮಾಡಲಾಗುತ್ತಿದೆ. 

ಈಗಾಗಲೇ ವಿಶ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ವೈರಸ್ ಜನರನ್ನು ಬಲಿ ಪಡೆದಿದ್ದು, ಕರ್ನಾಟಕದಲ್ಲಿಯೂ ಓರ್ವವ ಶಂಕಿತ ಸಾವಿಗೀಡಾಗಿದ್ದಾರೆ. 

Follow Us:
Download App:
  • android
  • ios