ಹಲವು ಮಾರ್ಗದಲ್ಲಿ KSRTC ಬಸ್ ಸಂಚಾರ ರದ್ದು

ಹಲವು ಮಾರ್ಗಗಳಲ್ಲಿ  KSRTC ಬಸ್ ಸಂಚಾರ ರದ್ದು ಮಾಡಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ತಗ್ಗಿದ್ದು ಈ ನಿಟ್ಟಿನಲ್ಲಿ ಹಲವು ಬಸ್ ಸಂಚಾರ ಸ್ಥಗಿತವಾಗಿದೆ. 

Coronavirus Effects On KSRTC Bus Service  In Raichur

ರಾಯಚೂರು [ಮಾ.17]: ಕೊರೋನಾ ವೈರಸ್ ಭೀತಿ ಹಿನ್ನೆಲೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 

ರಾಯಚೂರಿನಲ್ಲಿ ಪ್ರಯಾಣಿಕರ ಸಂಚಾರ ಕುಸಿದ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆಗೆ ಭಾರಿ ನಷ್ಟ ಎದುರಾಗಿದ್ದು ಈ ನಿಟ್ಟಿನಲ್ಲಿ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ. 

ಜಿಲ್ಲೆಯಲ್ಲಿ ಆರು ದಿನಗಳಲ್ಲಿ 28 ಲಕ್ಷ ರು. ನಷ್ಟ ಉಂಟಾಗಿದ್ದು, 40 ಬಸ್ ಗಳ ಸಂಚಾರ ಬಂದ್ ಮಾಡಲಾಗಿದೆ . ದಿನವೊಂದಕ್ಕೆ 100 ಟ್ರಿಪ್ ಕಡಿತ ಮಾಡಲಾಗಿದೆ. 

ಕೊರೋನಾ ಆತಂಕ ನಿವಾರಣೆಗೆ ರಾಜ್ಯ ಸರ್ಕಾರದಿಂದ ಟೆಲಿಗ್ರಾಂ ಗ್ರೂಪ್‌!...

ನಿತ್ಯ ಶ್ರೀಶೈಲಕ್ಕೆ ತೆರಳುತ್ತಿದ್ದ 55 ಬಸ್ ಗಳನ್ನು ರದ್ದು ಮಾಡಲಾಗಿದೆ. ಸದ್ಯ ಈ ಮಾರ್ಗದಲ್ಲಿ ನಿತ್ಯ ಕೇವಲ 15 ಬಸ್ ಗಳು ಸಂಚರಿಸುತ್ತಿವೆ. 

ರಾಯಚೂರು ಜಿಲ್ಲೆಯ ಒಟ್ಟು 8 ಡಿಪೋಗಳಲ್ಲಿ ಹಲವು ಮಾರ್ಗದ ಬಸ್ ಸಂಚಾರ ರದ್ದಾಗಿದೆ. ಕಲಬುರಗಿಯಲ್ಲಿ ಕೊರೋನಾ ಉಲ್ಬಣ ಹಿನ್ನೆಲೆಯಲ್ಲಿ ರಾಯಚೂರು - ಕಲಬುರಗಿ ಮಾರ್ಗದ ಬಸ್ ಸಂಚಾರ ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. 

ಇನ್ನು ರಾಜ್ಯದಾದ್ಯಂತ ಹಲವು ಬಸ್ ಸಂಚಾರ ರದ್ದು ಮಾಡಲಾಗಿದ್ದು, ಇದರಿಂದ ರಾಜ್ಯ ಸಾರಿಗೆ ಸಂಸ್ಥೆ 5 ಕೋಟಿಗೂ ಅಧಿಕ ನಷ್ಟ ಎದುರಿಸುತ್ತಿದೆ. 

Latest Videos
Follow Us:
Download App:
  • android
  • ios