ಬೆಂಗಳೂರು [ಮಾ.17]: ದೇಶದಲ್ಲಿ ಕೊರೋನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಕಟ್ಟೆಚ್ಚರ ಕೈಗೊಳ್ಳಲಾಗುತ್ತಿದೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಪಿಜಿಗಳಲ್ಲಿ ವಾಸಿಸುವವರು ತಮ್ಮ ಊರುಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ. 

ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನಗರ ವಾಸಿಗಳಿಗೆ ಮನವಿ ಮಾಡಲಾಗಿದೆ. 

ಸೋಂಕು ಶಂಕಿತರ ಎಡಗೈಗೆ ಸೀಲ್‌!...

ಇನ್ನು ಹಾಸ್ಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೂ ಸೂಚನೆ ನೀಡಿದ್ದು, ಕೂಡಲೇ ಪಿಜಿಗಳನ್ನು ತೊರೆಯಲು ಸೂಚಿಸಲಾಗಿದೆ. 

ಈಗಾಗಲೇ ಸರ್ಕಾರ ಒಂದು ವಾರಗಳ ಕಾಲ ರಜೆ ಘೋಷಣೆ ಮಾಡಿದ್ದು, ಹಾಸ್ಟೆಲ್ ಗಳಲ್ಲಿ ಇರುವವರ ಮೇಲೆ ಪಾಲಿಕೆ ಅಧಿಕಾರಿಗಳು ನಿವಾ ವಹಿಸಿದ್ದಾರೆ.