ಬೆಂಗಳೂರು(ಏ. 30)  ಕೊರೋನಾ ವಿರುದ್ಧದ ಹೋರಾಟ ಮುಂದುವರಿದಿದ್ದು ವಿಪಕ್ಷ ನಾಯಕರು ಸಹ ಸಭೆ ಮಾಡಿದ್ದಾರೆ.  ಸಭೆಯಲ್ಲಿ ರೇವಣ್ಣನವರ ಮಾತು ನಗೆ ಬುಗ್ಗೆಯನ್ನೇ ಎಬ್ಬಿಸಿತು.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಾನೇ ಪತ್ರ ಬರೆದು ಸಭೆ ಕರೆಯುವಂತೆ ಮನವಿ ಮಾಡಿದೆ ಎಂದು ರೇವಣ್ಣ ಹೇಳಿದಾಗ ಮಧ್ಯಪ್ರವೇಶ ಮಾಡಿದ ಡಿಕೆಶಿ ರೇವಣ್ಣ ಕಾಲೆಳೆದರು.  'ರೇವಣ್ಣ ನೀವ್ ಸಲಹೆ ಕೊಟ್ಟಿದ್ದು ಅಂತಾ ಗೊತ್ತೇ ಇರಲಿಲ್ಲ,  ನಿಂದೇನಾ ಈ ಪ್ಲಾನ್'  ಎಂದು ತಮ್ಮ ಎಂದಿನ ದಾಟಿಯಲ್ಲಿ ಹೇಳಿದರು.

ಕರ್ನಾಟಕಲ್ಲಿ ಮದ್ಯ ಮಾರಾಟ; ಸಂಪುಟ ಸಭೆ ತೀರ್ಮಾನ ಹೇಳಿದ ಅಶೋಕ್

ನೀನಾದ್ರೆ ಗಳಿಗೆ ಮುಹೂರ್ತ ಎಲ್ಲ ನೋಡಿರುತ್ತೀಯಾ ಬಿಡು ಎಂದರು ನಂತರ  ಕೆಎಂಎಫ್ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಹೆಚ್ ಡಿ ರೇವಣ್ಣ ನಡುವೆ ಜುಗಲ್ ಬಂದಿಯೇ ನಡೆಯಿತು.  ರೇವಣ್ಣ ನೀನು ಎಲ್ಲಾ ಮಾಡ್ತಿಯಾ,  ಕೆಎಂಎಫ್ ನಲ್ಲಿ ಎಷ್ಟು ಲೀಟರ್ ಹಾಲು ಮಾರಾಟ ಆಗ್ತಾ ಇದೆ ಅಂತಾ ಹೇಳೋದಿಲ್ವಲ್ಲ,  ಎಷ್ಟು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಹೇಳು..  ನಿಂಗೆ ಎಲ್ಲಾ ಗೊತ್ತಿರುತ್ತೆ ಎಂದು  ಮತ್ತೆ ರೇವಣ್ಣ ಕಾಲೆಳದರು.

ಕೆಎಂಎಫ್ ನಿಂದ 3 ಲಕ್ಷ ಲೀಟರ್ ಹಾಲನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಡಿಕೆಶಿ ಆರೋಪ ಮಾಡಿದ ನಂತರ ಮಾತಾಡ್ತಿನಿ ಇರಪ್ಪ ಎಂದ ಹೆಚ್ ಡಿ ರೇವಣ್ಣ ಎದ್ದು ನಿಂತುಕೊಂಡರು.  ಕೊರೋನಾ ಸಂಕಷ್ಟ ಪರಿಹಾರದ ಕುರಿತು ಚರ್ಚೆ ನಡೆಸಲು ವಿಪಕ್ಷ ನಾಯಕರು ಮತ್ತು ರೈತ ಮುಖಂಡರು ಸಭೆ ನಡೆಸಿದರು.