ಸರಳ ಗೃಹಪ್ರವೇಶ ಮಾಡಿ 500 ಜನರಿಗೆ ರೇಷನ್ ಕಿಟ್ ವಿತರಿಸಿದ ಬೆಳಗಾವಿ ವ್ಯಾಪಾರಿ
ಬೆಳಗಾವಿಯಲ್ಲಿ ವ್ಯಾಪಾರಿಯೊನಬ್ಬರ ಮಾದರಿ ಕೆಲಸ/ ಸರಳವಾಗಿ ಗೃಹಪ್ರವೇಶ ಮಾಡಿ 500 ಜನರಿಗೆ ರೇಷನ್ ಕಿಟ್ ವಿತರಿಸಿದ ವ್ಯಾಪಾರಿ/ ಸಾಮಾಜಿಕ ಅಂತರ ಕಾಯ್ದುಕೊಂಡು ಗೃಹಪ್ರವೇಶ/ ವ್ಯಾಪಾರಿ ಕೆಲಸಕ್ಕೆ ಶ್ಲಾಘನೆ
ಬೆಳಗಾವಿ(ಮೇ 01) ಲಾಕ್ ಡೌನ್ ನಡುವೆ ಬೆಳಗಾವಿ ವ್ಯಕ್ತಿಯೊಬ್ಬರು ಮಾದರಿ ಕೆಲಸ ಮಾಡಿದ್ದಾರೆ. ಸರಳವಾಗಿ ಗೃಹಪ್ರವೇಶ ಮಾಡಿ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ ವ್ಯಾಪಾರಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಾವಿಯ ಫುಲ್‌ಭಾಗ್ ಗಲ್ಲಿಯಲ್ಲಿ ಸಿಂಪಲ್ ಗೃಹಪ್ರವೇಶ ಕಾರ್ಯಕ್ರಮ ಏರ್ಪಾಡಾಗಿತ್ತು. ಕುಟುಂಬಸ್ಥರ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಗೃಹಪ್ರವೇಶ ನಡೆಸಲಾಗಿದೆ. ಪಾಂಗೂಲ್ ಗಲ್ಲಿಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ರೋಹಿತ್ ರಾವಳ್ ಅವರ ಕೆಲಸ ನಿಜಕ್ಕೂ ಮಾದರಿ.
ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್
ಕಳೆದ 80 ವರ್ಷಗಳಿಂದ ಬೆಳಗಾವಿಯಲ್ಲಿ ವಾಸವಿರುವ ರಾವಳ್ ಕುಟುಂಬ ಮೆಚ್ಚುಗೆಗೆ ಪಾತ್ರವಾಗಿದೆ. 'ಬೆಳಗಾವಿ ಜನರಿಂದ ನನ್ನ ಬ್ಯುಸಿನೆಸ್ ಇಂಪ್ರೂವ್ ಆಗಿದೆ' 'ಲಾಕ್‌ಡೌನ್‌ನಲ್ಲಿ ಬಡವರಿಗೆ ಸಹಾಯವಾಗಲೆಂದು ರೇಷನ್ ಕಿಟ್ ವಿತರಣೆ ಮಾಡಿದ್ದೇನೆ ಎಂದು ವ್ಯಾಪಾರಿ ರೋಹಿತ್ ರಾವಳ್ ತಿಳಿಸಿದ್ದಾರೆ.