Asianet Suvarna News Asianet Suvarna News

ಬಾಗಲಕೋಟೆ: ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋಗಿ ಬಂದವರಿಗೆ ವಕ್ಕರಿಸಿದ ಕೊರೋನಾ..!

ಸೋಂಕಿತರ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಮನೆಯವರ ತಪಾಸಣೆಗೆ ನಿರ್ಧಾರ| 50 ಮತ್ತು 65 ವರ್ಷದ ಇಬ್ಬರು ಪುರುಷರಿಗೆ ಕೊರೋನಾ ಸೋಂಕು| ಮನೆಯವರು ಹಾಗೂ ನೆರೆಹೊರೆಯ ಜನರ ಗಂಟಲು ದ್ರವ ಪರೀಕ್ಷೆಗೆ ಮುಂದಾದ ಜಿಲ್ಲಾ ಆರೋಗ್ಯ ಇಲಾಖೆ| 
 

Coronavirus Confirm to Two Persons After Came From Maharashtra to Bagalkot grg
Author
Bengaluru, First Published Mar 17, 2021, 3:34 PM IST

ಬಾಗಲಕೋಟೆ(ಮಾ.17): ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋಗಿ ಬಂದವರಿಗೆ ಮಹಾಮಾರಿ ಕೊರೋನಾ ವಕ್ಕರಿಸಿದೆ. ಹೌದು, ಜಿಲ್ಲೆಯ ರಬಕವಿ-ಬನಹಟ್ಟಿ ಮೂಲದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರಕ್ಕೆ ಹೋಗಿ ಬಂದ 50 ಮತ್ತು 65 ವರ್ಷದ ಇಬ್ಬರು ಪುರುಷರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಡಿಹೆಚ್ಓ ಡಾ‌.ಅನಂತ್ ದೇಸಾಯಿ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಕಳೆದ ನಾಲ್ಕು ದಿನಗಳ ಹಿಂದೆ ಕನ್ಯೆ ನೋಡೋದಕ್ಕಾಗಿ‌ ಮಹಾರಾಷ್ಟ್ರಕ್ಕೆ ಕುಟುಂಬ ತೆರಳಿತ್ತು. ವಾಪಸ್ ಬರುವ ವೇಳೆ ಕರ್ನಾಟಕ- ಮಹಾರಾಷ್ಟ್ರಚ ಗಡಿಯಲ್ಲಿ ಪರಿಶೀಲನೆ ನಡೆಸಿ ಕೋವಿಡ್ ತಪಾಸಣೆ ಮಾಡಲಾಗಿತ್ತು. ಈ ವೇಳೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ, 

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ? ಇಲ್ಲಿದೆ ಸತ್ಯಾಸತ್ಯತೆ!

ಸದ್ಯ ಇಬ್ಬರೂ ಸೋಂಕಿತನ್ನ ಹೋಮ್ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ಸೋಂಕಿತರ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಮನೆಯವರ ತಪಾಸಣೆಗೆ ನಿರ್ಧರಿಸಲಾಗಿದೆ. ಮನೆಯವರು ಹಾಗೂ ನೆರೆಹೊರೆಯ ಜನರ ಗಂಟಲು ದ್ರವ ಪರೀಕ್ಷೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಡಿಹೆಚ್ಓ ಡಾ‌.ಅನಂತ್ ದೇಸಾಯಿ ಹೇಳಿದ್ದಾರೆ.
 

Follow Us:
Download App:
  • android
  • ios