ಬಳ್ಳಾರಿ: 21 ವಿದ್ಯಾರ್ಥಿಗಳಿಗೆ ಸೋಂಕು, ಆತಂಕದಲ್ಲಿ ಜನತೆ..!
ಹಾಸ್ಟೆಲ್‌ನಲ್ಲಿದ್ದ 88 ಜನರಿಗೆ ಕೊರೋನಾ ತಪಾಸಣೆ| 21 ವಿದ್ಯಾರ್ಥಿಗಳಿಗೆ ಕೊರೋನಾ ದೃಢ| ಹಾಸ್ಟೆಲ್ ಸೀಲ್‌ಡೌನ್| ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಆರೋಗ್ಯ ತಪಾಸಣೆ|
ಬಳ್ಳಾರಿ(ಮಾ.24): ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್) 21 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.
ರಜೆಯ ಮೇಲೆ ಊರಿಗೆ ತೆರಳಿದ್ದ ವಿದ್ಯಾರ್ಥಿಗಳು ಮಾ.14ರಂದು ಮರಳಿ ಬಂದಿದ್ದರು. ಕೆಲವರಿಗೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಹಾಸ್ಟೆಲ್‌ನಲ್ಲಿದ್ದ 88 ಜನರಿಗೆ ಕೊರೋನಾ ತಪಾಸಣೆ ಮಾಡಿಸಲಾಗಿದ್ದು, ಈ ಪೈಕಿ 21 ಜನರಿಗೆ ಕೊರೋನಾ ವೈರಸ್ ಇರುವುದು ಖಚಿತವಾಗಿದೆ.
ಬಳ್ಳಾರಿ ಅಧಿದೇವತೆ ಶ್ರೀ ಕನಕ ದುರ್ಗಾದೇವಿಯ ಸಿಡಿ ಬಂಡಿ ರಥೋತ್ಸವ
ವೈರಸ್ ಕಂಡು ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ 19 ಮೆಡಿಕಲ್ ಹಾಗೂ ಇಬ್ಬರು ಡೆಂಟಲ್ ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ಸೀಲ್‌ಡೌನ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ 39 ಜನರಿಗೆ ಸೋಂಕು ದೃಢವಾಗಿದ್ದು, ಎರಡನೇ ಹಂತದ ಕೊರೋನಾ ವೈರಸ್ ದಾಳಿಯ ಆತಂಕ ಹುಟ್ಟಿಸಿದೆ.