ಬೆಂಗಳೂರು(ಡಿ.06): ನಗರದಲ್ಲಿ ಶನಿವಾರ 709 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 786 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,73,291ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,49,929ಕ್ಕೆ ತಲುಪಿದೆ. 19,185 ಸಕ್ರಿಯ ಪ್ರಕರಣಗಳಿದ್ದು, 145 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬರಲಿದೆ ಇನ್ನಷ್ಟು ಟಫ್ ರೂಲ್ಸ್, ನ್ಯೂ ಇಯರ್ ಸೆಲಬ್ರೇಶನ್‌ಗೆ ರಿಲೀಫ್; ಹೊಸ ನಿಯಮಗಳಿವು!

ಶನಿವಾರ ಆರು ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 4,176ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.