Asianet Suvarna News Asianet Suvarna News

ಯುಟ್ಯೂಬ್‌ನಲ್ಲಿ ಕೊರೋನಾ ಹಾಡು ವೈರಲ್!

ಕೊರೋನಾ ಸೋಂಕು ಕುರಿತು ಜಾಗೃತಿ| ಕೊಪ್ಪಳದ ಶಿಕ್ಷಕನಿಂದ ಜಾಗೃತಿ ಹಾಡು| ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆಗುತ್ತಿರವ ಜಾಗೃತಿ ಹಾಡು| 

Coronavirus Awareness song goes on Viral
Author
Bengaluru, First Published Mar 20, 2020, 2:12 PM IST

ಕೊಪ್ಪಳ(ಮಾ.20): ಜಗತ್ತಿನೆಲ್ಲೆಡೆ ಜನರರನ್ನು ಭೀತಿಗೆ ತಳ್ಳಿರುವ ಮಾರಣಾಂತಿಕ ಸೋಂಕು ಕೊರೋನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ತಾವೇ ಸಾಹಿತ್ಯ ರಚಿಸಿ, ಹಾಡಿರುವ ಹಾಡು ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

"

ಕೊಪ್ಪಳ ತಾಲೂಕಿನ ಬಹದ್ದೂರ್‌ ಬಂಡಿ ಕ್ಲಸ್ಟರ್‌ನ ಸಿಆರ್‌ಪಿ(ಸಮೂಹ ಸಂಪನ್ಮೂಲ ವ್ಯಕ್ತಿ) ಆಗಿರುವ ಶಿಕ್ಷಕ ಹನುಮಂತಪ್ಪ ಕುರಿ ಎಂಬುವರು, ‘ಬಂದಿದೆ ಕೊರೋನಾ ಮನುಕುಲ ಜಾಗೃತಿಗೊಳಿಸೋಣ’... ಎನ್ನುವ ಹಾಡನ್ನು ರಚಿಸಿದ್ದು, ಅದನ್ನು ‘ಒಳಿತು ಮಾಡು ಮನುಸಾ ನೀ ಇರೋದು ಮೂರು ದಿವಸಾ’ ಹಾಡಿನ ಧಾಟಿಯಲ್ಲಿ ಹಾಡಿದ್ದಾರೆ. 

ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್

ತಾವೇ ಚಿತ್ರೀಕರಿಸಿ, ಅಭಿನಯಿಸಿರುವ ಈ ಹಾಡನ್ನು ಹನುಮಂತಪ್ಪ ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದು, ಟ್ರೆಂಡ್‌ ಆಗುತ್ತಿದೆ. ಕೊಪ್ಪಳ ಸೇರಿದಂತೆ ಈ ಭಾಗದ ಕೆಲ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತಗಳು ಈ ಹಾಡನ್ನು ಬಳಸಿಕೊಳ್ಳುತ್ತಿವೆ.
 

Follow Us:
Download App:
  • android
  • ios