ಜಿಲ್ಲಾಧಿಕಾರಿಗೆ ರಾಕಿ ಕಟ್ಟಿದ ಆಶಾ ಕಾರ್ಯಕರ್ತೆ ರಾಜೀವಿ...!
ತುಂಬು ಗರ್ಭಿಣಿಯನ್ನು ರಾತ್ರಿ ಮೂರು ಗಂಟೆಗೆ ತಮ್ಮ ಆಟೋದಲ್ಲಿ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿ ಉಪ ರಾಷ್ಟ್ರಪತಿಗಳ ಗಮನ ಸೆಳೆದಿದ್ದ ಕೊರೋನಾ ವಾರಿಯರ್ ಮತ್ತೆ ಸುದ್ದಿಯಾಗಿದ್ದಾರೆ.
ಉಡುಪಿ, (ಆ.04): ಕೊರೋನಾ ವಾರಿಯರ್, ಉಪರಾಷ್ಟ್ರಪತಿಗಳ ಗಮನ ಸೆಳೆದಿದ್ದ ಉಡುಪಿಯ ರಾಜೀವಿ ಅವರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ್ದಾರೆ.
ಉಪರಾಷ್ಟ್ರಪತಿ ಶ್ಲಾಘನೆಗೆ ಉಡುಪಿಯ ಧೀರ ಆಶಾ ಕಾರ್ಯಕರ್ತೆಯ ಮನದ ಮಾತು..!
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಜೀವಿ, ನನ್ನ ಕೆಲಸವನ್ನು ಡಿ.ಸಿ ಗುರುತಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಆಶಾ ಕಾರ್ಯಕರ್ತೆಯರಿಗೆ ಆರಂಭದಿಂದಲೂ ಜಿಲ್ಲಾಧಿಕಾರಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ರಾಖಿ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ ಎಂದರು.
ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ. ಅವರು ರಾಖಿ ಕಟ್ಟಿದ ಕ್ಷಣ ನಾನು ಭಾವುಕನಾದೆ. ನಿಜಕ್ಕೂ ಸಹ ಕೊರೊನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ ಎಂದು ಡಿಸಿ ಜಿ. ಜಗದೀಶ್ ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಉಪರಾಷ್ಟ್ರಪತಿ ಮೆಚ್ಚುಗೆಗೆ ಪಾತ್ರರಾದ ಉಡುಪಿ ಆಶಾ ವರ್ಕರ್ ಯಕ್ಷಗಾನ ಕಲಾವಿದೆಯೂ ಹೌದು
ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪೆರ್ಣಂಕಿಲದಿಂದ ತುಂಬು ಗರ್ಭಿಣಿಯನ್ನು ರಾತ್ರಿ ಮೂರು ಗಂಟೆಗೆ ತಮ್ಮ ಆಟೋದಲ್ಲಿ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿದ್ದರು. ತಾನೇ ಆಟೋ ಚಲಾಯಿಸಿಕೊಂಡು ಹೋದ ಮಹಿಳೆಯ ದಿಟ್ಟತನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು. ಅಲ್ಲದೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಜನಪ್ರತಿನಿಧಿಗಳು ರಾಜೀವಿ ಕಾರ್ಯ ಶ್ಲಾಘಿಸಿದ್ದರು.