ಉಡುಪಿ(ಮೇ 30): ಹೊರ ರಾಜ್ಯ- ದೇಶದಳಿಂದ ಬಂದು ಜಿಲ್ಲೆಯಲ್ಲಿ ಕ್ವಾರಂಟೈನಲ್ಲಿ 7 ದಿನಗಳನ್ನು ಪೂರೈಸಿದ ಬಹುತೇಕ ಜನರು ಮನೆಗೆ ತೆರಳಿದ್ದಾರೆ. ಅವರಲ್ಲಿ ಕೊರೋನ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ.

ಕೆಲವು ದಿನ ಸಾವಿರಕ್ಕೂ ಅಧಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು, ಶುಕ್ರವಾರ ಕೇವಲ 4 ಮಾದರಿಗಳನ್ನಷ್ಟೇ ಸಂಗ್ರಹಿಸಲಾಗಿದೆ. ಅವುಗಳಲ್ಲಿ ಕೊರೋನಾ ಸಂಪರ್ಕದಲ್ಲಿದ್ದ ಮತ್ತು ಉಸಿರಾಟದ ತೊಂದರೆ ಇದ್ದ 2 ಮತ್ತು ಶೀತಜ್ವರ ಇದ್ದ 2 ಮಂದಿ ಸೇರಿದ್ದಾರೆ.

ದೆಹಲಿಯಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು!

ಕ್ವಾರಂಟೈನ್‌ನಲ್ಲಿದ್ದ ಸುಮಾರು 8100ಕ್ಕೂ ಅಧಿಕ ಮಂದಿಯಲ್ಲಿ ಈಗ 7 ದಿನ ಪೂರೈಸದ ಕೇವಲ 328 ಮಂದಿ ಮಾತ್ರ ಕ್ವಾರಂಟೈನ್‌ನಲ್ಲಿದ್ದಾರೆ. 70 ಮಂದಿ ಜಿಲ್ಲೆಯ ವಿವಿಧ ಕೋವಿಡ್‌ ಆಸ್ಪತ್ರೆಗಳ ಐಸೋಲೇಶನ್‌ ವಾರ್ಡಿನಲ್ಲಿದ್ದಾರೆ. ಶುಕ್ರವಾರ ಒಂದೇ ದಿನ 677 ವರದಿಗಳು ಬಂದಿದ್ದು, ಅವರಲ್ಲಿ 15 ಮಂದಿಗೆ ಪಾಸಿಟಿವ್‌ ಬಂದಿದ್ದರೆ, ಇನ್ನೂ 6019 ಮಾದರಿಗಳ ವರದಿ ಬರಬೇಕಾಗಿದೆ.