ಆಕ್ಸಿಜನ್ ಕೊರತೆ ನಿವಾರಣೆಗೆ ಕರ್ನಾಟಕದಲ್ಲಿ ಎಮರ್ಜನ್ಸಿ ಸೂತ್ರ

ಆಮ್ಲಜನಕ ಕೊರತೆ ನಿವಾರಣೆಗೆ ಸರ್ಕಾರದ ಕ್ರಮ/ ವಿವಿಧ ಇಲಾಖೆಗಳ ಪ್ರಮುಖರೊಂದಿಗೆ ಸಭೆ/ ಸಾರಿಗೆ, ವಾಣಿಜ್ಯ ತೆರಿಗೆ, ಇಂಧನ ಇಲಾಖೆಯ ಮುಖ್ಯಸ್ಥರೊಂದಿಗೆ ಸಭೆ/ ಕೈಗಾರಿಕಾ ಕಾರಣಕ್ಕೆ ಬಳಸುವ ಆಮ್ಲಜನಕ ಆರೋಗ್ಯಕ್ಕೆ ನೀಡುವಂತೆಯೂ ಸುತ್ತೋಲೆ

Corona Second wave karnataka govt solution for oxygen problem mah

ಬೆಂಗಳೂರು(ಏ.  20) ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಸಿಗುತ್ತಿಲ್ಲ.. ಸರ್ಕಾರ ವಿಫಲವಾಗಿದ್ದು ಜನರು ಬೀದಿ ಹೆಣವಾಗುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದೆಲ್ಲದರ ಪರಿಣಾಮ ಎಂಬಂತೆ ಆಕ್ಸಿಜನ್‌ ಪೂರೈಕೆಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸಮನ್ವಯಕ್ಕೆ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ. ಸಾರಿಗೆ, ವಾಣಿಜ್ಯ ತೆರಿಗೆ, ಇಂಧನ ಇಲಾಖೆಯ ಮುಖ್ಯಸ್ಥರೊಂದಿಗೆ ಸಭೆ ನಡೆದಿದೆ. ಅಮ್ಲಜನಕ ಉತ್ಪಾದಕರೂ ಸಭೆಯಲ್ಲಿ ಭಾಗವಹಿಸಿದ್ದರು.

ಆಕ್ಸಿಜನ್ ಸಮಸ್ಯೆ ಮೂಲ ಹೇಳಿದ ಸುಧಾಕರ್.. ಎಲ್ಲ ಬಗೆಹರಿಯಲಿದೆ

ಸಭೆಯಲ್ಲಿ ಪ್ರಮುಖ ಸೂಚನೆಗಳನ್ನು ನೀಡಲಾಗಿದ್ದು ಗಮನಾರ್ಹ ವಿಚಾರ. ಹಾಗಾದರೆ ಆಮ್ಲಜನಕ ಕೊರತೆ ಬಗೆಹರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಏನು?

* ಆಮ್ಲಜನಕ ಪೂರೈಕೆ ಮಾಡುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸುವಂತೆ ಸೂಚನೆ
* ಆಮ್ಲಜನಕ ಪೂರೈಕೆ ಮಾಡುವ ವಾಹನಗಳಿಗೆ ತುರ್ತು ವಾಹನಗಳ ಸ್ಟಿಕ್ಕರ್‌ ಅಂಟಿಸಲು ನಿರ್ಧಾರ
* ಎಮರ್ಜೆನ್ಸಿ ಸ್ಟಿಕ್ಕರ್‌ ಗಳನ್ನು ಅಂಟಿಸುವ ಮೂಲಕ ಆಮ್ಲಜನಕ ಪೂರೈಸುವ ವಾಹನಗಳಿಗೆ ತುರ್ತು ದಾರಿ ಬಿಡುವಂತೆ ಸೂಚನೆ
* ಟೋಲ್‌ ಗಳಲ್ಲಿ ಆಂಬುಲೆನ್ಸ್‌ ಲೇನ್‌ ನಲ್ಲಿಯೇ ಆಕ್ಸಿಜನ್‌ ಪೂರೈಕೆ ವಾಹನ ಬಿಡುವಂತೆ ಸೂಚನೆ
* ಹೊಸದಾಗಿ ಯೂನಿರ್ವಸಲ್‌ ಕಂಪನಿಗೆ ಆಕ್ಸಿಜನ್‌ ಪ್ಲಾಂಟ್‌ ಹಾಕಲು ಅನುಮತಿ. ಅವರಿಗೆ ಬೇಕಾದ ವಿದ್ಯುತ್‌ ಸರಬರಾಜು ನೀಡುಲು ಅಧಿಕಾರಿಗಳಿಗೆ ಸೂಚನೆ
* ಹೆದ್ದಾರಿಯಲ್ಲಿ ಬೇಕಾದ ಅಗತ್ಯ ಮಾರ್ಪಾಡು ಮಾಡಲು ಹೈವೇ ಅಧಿಕಾರಿಗಳಿಗೂ ಸೂಚನೆ 
* ಡಿ ಆರ್‌ ಡಿ ಓ ನಿಂದ 5-6 ದಿನಗಳಲ್ಲಿ ಆಮ್ಲಜನಕ ತಯಾರಿಕೆಗೆ ಸಿದ್ಧತೆ
* ಬೆಂಗಳೂರು ನಗರದಲ್ಲಿ ರೋಗಿಗಳಿಗೆ ಆಕ್ಸಿಜನ್‌ ಕೊರತೆ ಆಗದ ರೀತಿ ಪರಿಹಾರ
* ಜಿಂದಾಲ್‌ ಕಂಪನಿಯಿಂದಲೂ ನೆರವು
* ಕೈಗಾರಿಕಾ ಕಾರಣಕ್ಕೆ ಬಳಸುವ ಆಮ್ಲಜನಕ ಆರೋಗ್ಯಕ್ಕೆ ನೀಡುವಂತೆಯೂ ಸುತ್ತೋಲೆ

 

Latest Videos
Follow Us:
Download App:
  • android
  • ios