Asianet Suvarna News Asianet Suvarna News

ಬೀದರ್‌ ಜಿಲ್ಲಾಧಿಕಾರಿಗೆ ಕೋವಿಡ್‌ ಸೋಂಕು

ಬೀದರ್ ಜಿಲ್ಲಾಧಿಕಾರಿಗೂ ಕೊರೋನಾ ಸೋಂಕು ತಗುಲಿದ್ದು, ಇದರಿಂದ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

Corona Positive For Bidar DC Ramachandran
Author
Bengaluru, First Published Sep 4, 2020, 7:20 AM IST

 ಬೀದರ್‌ (ಸೆ.04): ಕೊರೋನಾ ವಾರಿಯರ್‌ಗಳ ಜೊತೆ ಸತತವಾಗಿ ತೊಡಗಿ ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿದ್ದಲ್ಲದೆ ಕೋವಿಡ್‌ ವಾರ್ಡಿಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದ ಹಾಗೂ ಜಿಲ್ಲೆಗೆ ಆಗಮಿಸುತ್ತಿರುವ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಜಿಲ್ಲಾಧಿಕಾರಿ ರಾಮಚಂದ್ರನ್‌ಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ ಎರಡು ತಿಂಗಳ ಹಿಂದಷ್ಟೇ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ರಾಮಚಂದ್ರನ್‌, ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಕೋವಿಡ್‌ ಸೋಂಕು ನಿಯಂತ್ರಿಸುವಲ್ಲಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿರುವದು ಜನರಲ್ಲಿ ರೋಗದ ಬಗ್ಗೆ ಕೊಂಚ ನಿರಾಳ ಭಾವ ಮೂಡಿಸಿತ್ತು. ಇದೇ ಸಂದರ್ಭದಲ್ಲಿ ಎದುರಾಗಿರುವ ಅತಿವೃಷ್ಟಿಯ ಹಾನಿಯ ಬಗ್ಗೆಯೂ ಸ್ಥಳಕ್ಕೆ ತೆರಳಿ ರೈತರಿಗೆ ಅಭಯ ನೀಡುತ್ತಿರುವ ಜಿಲ್ಲಾಧಿಕಾರಿಗೆ ಸೋಂಕು ತಗುಲಿದೆ.

ಸರಿ​ಯಾದ ಚಿಕಿತ್ಸೆ ಸಿಗು​ತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು ...

ಇವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಬ್ರಿಮ್ಸ್‌ ವೈದ್ಯರ ಸಲಹೆಯಂತೆ ತಮ್ಮ ಗೃಹದಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಧಿಕಾರಿ, ಕೊರೋನಾ ಮುಕ್ತರಾಗಿ ಬೇಗ ಹೊರಬರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಜನತೆಯ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಅಷ್ಟಕ್ಕೂ ಅವರು ಅದಕ್ಕೆ ಪ್ರತಿಕ್ರಿಯಿಸಿ ಜಿಲ್ಲೆಯ ಜನರಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.

ಜಗದೀಶ ಶೆಟ್ಟರ್‌ ಸಭೆಯಲ್ಲಿ ಜಿಲ್ಲಾಧಿಕಾರಿ:

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‌ಗೆ ಮರುದಿನ ಕೊರೋನಾ ಸೋಂಕಿನ ತಪಾಸಣೆ ನಡೆಸಿಕೊಂಡಾಗ ಪಾಸಿಟಿವ್‌ ಬಂದಿತ್ತು. ಅಂದು ಶಾಸ​ಕರ ಅಕ್ಕಪಕ್ಕದಲ್ಲಿಯೇ ಇದ್ದವರಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರೂ ಒಬ್ಬರು.

Follow Us:
Download App:
  • android
  • ios