ಮೈಸೂರು (ಆ.13): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸ್ಪೋಟಗೊಂಡಿದೆ. ಒಂದೇ ದಿನ 544 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಹನ್ನೊಂದು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈವರೆಗೆ 400 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದೇ ಈವರೆಗಿನ ಅತಿ ಹೆಚ್ಚು ಪ್ರಕರಣವಾಗಿತ್ತು. ಆದರೆ ಗುರುವಾರ ಏಕಾಏಕಿ 544 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 285 ಮಂದಿಗೆ ಪ್ರಾಥಮಿಕ ಸಂಪರ್ಕದಿಂದಲೇ ಸೋಂಕು ತಗುಲಿದ್ದು, 112 ಐಎಲ್‌ಐ ಪ್ರಕರಣ, 17 ಸರಿ ಮತ್ತು 130 ಮಂದಿ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆಯು 8 ಸಾವಿರ ಗಾಡಿದಾಟಿದ್ದು, 8467 ಮಂದಿ ಇದ್ದಾರೆ.

ಕೊರೋನಾ ಸೋಂಕು ಉಲ್ಬಣಗೊಂಡಂತೆ ಹನ್ನೊಂದು ಮಂದಿ ಬುಧವಾರ ಮೃತಪಟ್ಟಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆಯು 262 ಮಂದಿಗೆ ಏರಿಕೆಯಾಗಿದೆ.

ಸಿದ್ದರಾಮಯ್ಯಗೆ ಕೊರೋನಾ ದೃಢ, ಮೊಮ್ಮಗ ಕ್ವಾರಂಟೈನ್

ಆದರೆ ಒಟ್ಟು 668 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 4,781 ಮಂದಿ ಕೊರೋನಾ ಸೋಂಕಿತರು ಗುಣಮುಖರಾದಂತಾಗಿದೆ. ಹಾಲಿ ಸಕ್ರಿಯ ಪ್ರಕರಣ 3,424 ಇದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 2101 ಮಂದಿ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿರುವುದು ವಿಶೇಷ. ಹೊಸ ಪ್ರಕರಣಗಳ ಅನ್ವಯ ಜಿಲ್ಲೆಯಲ್ಲಿ ಒಟ್ಟು 101 ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ. ಅತಿಹೆಚ್ಚು ಕಂಟೈನ್ಮೆಂಟ್‌ ವಲಯಗಳು ಮೈಸೂರು ನಗರದಲ್ಲಿಯೇ ಇದೆ.

ನಗರದಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಚಿಕ್ಕಗಡಿಯಾರ ವೃತ್ತದಲ್ಲಿ ಸಾರ್ವಜನಿಕರು ಮತ್ತು ರಸ್ತೆ ಬದಿ ವ್ಯಾಪಾರಿಗಳಿಗೆ ಕೊರೋನಾ ಪರೀಕ್ಷೆ ನಡೆಸಲಾಯಿತು. ಸಮುದಾಯಕ್ಕೆ ಸೋಂಕು ಹರಡಿರಬಹುದೇ ಎಂಬುದನ್ನು ಪತ್ತೆಹಚ್ಚಲು ಮತ್ತು ರಸ್ತೆ ಬದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ನಡೆಸಿದ ಈ ಪರೀಕ್ಷೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಕೊರೋನಾ ಭೀತಿ ಮಧ್ಯೆ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭ: ಮಾರ್ಗಸೂಚಿ ಪ್ರಕಟ...

ರಸ್ತೆ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ಮುಂಜಾಗ್ರತ ಕ್ರಮವಾಗಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದವರು ಮತ್ತು ರೋಗ ಲಕ್ಷಣ ಇರುವವರೂ ಕೂಡ ಪರೀಕ್ಷೆಗೆ ಒಳಗಾದರು. ಎಲ್ಲರಿಗೂ ಸ್ವಾಬ್‌ ಪರೀಕ್ಷೆ ನಡೆಸಲಾಯಿತು.