Asianet Suvarna News

ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಫಿಕ್ಸ್‌: ಕೊರೋನಾ ಸೋಂಕು ಮತ್ತೆ ಏರಿಕೆ ಹಾದಿ ಹಿಡೀತಾ?

* ಮಂಗಳವಾರ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ
* ಡೆಲ್ಟಾಪ್ಲಸ್‌ ವೈರಸ್‌ ಹರಡುವ ಬಗ್ಗೆ ಎಚ್ಚರಿಕೆ ನೀಡಿದ ವೈದ್ಯರು
* ಬೆಳಗಾವಿ ಜಿಲ್ಲೆಯೊಂದಿಗೆ ಹೆಚ್ಚಿನ ನೆಂಟಸ್ಥಿಕೆ ಇರುವುದು ಕೂಡಾ ಗದಗ ಜಿಲ್ಲೆಗೆ ಹೆಚ್ಚಿನ ಆತಂಕ
 

Corona Positive Cases Incresing in Gadag grg
Author
Bengaluru, First Published Jun 30, 2021, 1:00 PM IST
  • Facebook
  • Twitter
  • Whatsapp

ಗದಗ(ಜೂ.30): ಮೇ, ಏಪ್ರೀಲ್‌ ಹಾಗೂ ಜೂನ್‌ ಮೊದಲ ವಾರದಲ್ಲಿ ಅಬ್ಬರಿಸುತ್ತಿದ್ದ ಕೊರೋನಾ ಸೋಂಕು ಕಳೆದ ಹಲವು ದಿನಗಳಿಂದ ಇಳಿಕೆ ಹಾದಿಯಲ್ಲಿತ್ತು. ಪ್ರತಿ ದಿನವೂ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಇದು ಜಿಲ್ಲೆಯ ಜನರಲ್ಲಿ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಮಂಗಳವಾರ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 26 ಜನರಿಗೆ ಸೋಂಕು ಖಚಿತವಾಗಿದ್ದು, 19 ಜನ ಗುಣಮುಖರಾಗಿದ್ದು, ಇದು ಆತಂಕದ ಬೆಳವಣಿಗೆಯಾಗಿದೆ.

ಈಗಾಗಲೇ ದೇಶದ ಹಲವಾರು ಭಾಗಗಳಲ್ಲಿ ಡೆಲ್ಟಾಪ್ಲಸ್‌ ವೈರಸ್‌ ಹರಡುವ ರೀತಿಯ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದು, ಮಂಗಳವಾರ ಗುಣಮುಖರಾಗುವವರ ಸಂಖ್ಯೆಗಿಂತ ಹೊಸದಾಗಿ ಸೋಂಕಿತರಾದವರ ಸಂಖ್ಯೆ ಹೆಚ್ಚಾಗಿದೆ. 

ಡೆಲ್ಟಾ ಭೀತಿ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ, ಪ್ರಯಾಣಿಕರ ಮೇಲೆ ನಿಗಾ: ಡಾ. ಸುಧಾಕರ್

ಆದರೆ ಕೇವಲ 26 ಜನರಿಗೆ ಮಾತ್ರ ಸೋಂಕು ತಗಲಿದ್ದು ಕೊಂಚ ಸಮಾಧಾನದ ವಿಚಾರವಾಗಿದೆ. ಆದರೆ ಗದಗ ಜಿಲ್ಲೆಯ ಜನರು ಪಕ್ಕದ ಮಹಾರಾಷ್ಟ್ರ ರಾಜ್ಯದ ಪುಣೆ, ಸೊಲ್ಲಾಪುರ, ಮುಂಬೈ ನಗರಗಳೊಂದಿಗೆ ಸಾಕಷ್ಟು ಸಂಪರ್ಕ ಹೊಂದಿರುವುದು, ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯೊಂದಿಗೆ ಹೆಚ್ಚಿನ ನೆಂಟಸ್ಥಿಕೆ ಇರುವುದು ಕೂಡಾ ಗದಗ ಜಿಲ್ಲೆಯಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
 

Follow Us:
Download App:
  • android
  • ios