ಬಳ್ಳಾರಿ(ಸೆ.18): ನಗರದ ವಿಮ್ಸ್‌ ದಂತ ವೈದ್ಯಕೀಯ ಕಾಲೇಜಿನ ಕೊರೋನಾ ಸೋಂಕಿತರಿಗೆ ಯೋಗ ತರಬೇತಿ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದ ನಗರದ ಯೋಗ ಶಿಕ್ಷಕಿ ಸಾವಿತ್ರಿ ಅವರು ಆಸ್ಪತ್ರೆಯ ಶೌಚಾಲಯವನ್ನ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.

ದಂತ ವೈದ್ಯಕೀಯ ಕಾಲೇಜಿನ ಕೊರೋನಾ ಚಿಕಿತ್ಸಾ ಕೇಂದ್ರಕ್ಕೆ ಸಾವಿತ್ರಿ ಅವರು ದಾಖಲಾಗಿದ್ದು, ಸಾವಿತ್ರಿ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಬಿಡುಗಡೆ ಮಾಡಿದ್ದಾರೆ. 

ಬೇರೆ ಖಾತೆಗೆ ಬೇಡಿಕೆ: ಸಚಿವ ಆನಂದ ಸಿಂಗ್‌ ಪ್ರತಿಕ್ರಿಯೆ

ನಾನು ಸ್ವ ಇಚ್ಛೆಯಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದೇನೆ, ಇದು ನನ್ನ ಕರ್ತವ್ಯವಾಗಿದೆ ಎಂದು ಸಾವಿತ್ರಿ ಅವರು ಹೇಳಿದ್ದಾರೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರ ಸೌಲಭ್ಯ ಕಲ್ಪಿಸುತ್ತದೆ, ಅದನ್ನು ನಾವು ಸಮರ್ಪಕವಾಗಿಟ್ಟುಕೊಳ್ಳಬೇಕಾಗಿದೆ ಎಂದು ಸಾವಿತ್ರಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.