* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ* ಸೋಂಕಿತ ಗರ್ಭಿಣಿ ಹೆರಿಗೆ ಅವಕಾಶ ಇಲ್ಲ, ಕೊಪ್ಪಳದ ಆಸ್ಪತ್ರೆಗೆ ಹೋಗಲು ವೈದ್ಯರ ಸೂಚನೆ* ಗಂಡು ಮಗುವಿಗೆ ಜನ್ಮ ನೀಡಿದ ಗಿರಿಜಮ್ಮ 

ಗಂಗಾವತಿ(ಮೇ.31): ತಾಲೂಕಿನ ಶ್ರೀರಾಮನಗರದ ಕೊರೋನಾ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಶ್ರೀರಾಮ ನಗರದ ಗಿರಿಜಮ್ಮ ಎನ್ನುವ ಮಹಿಳೆಗೆ ಈಚೆಗೆ ಕೋವಿಡ್‌ ಸೋಂಕು ದೃಢವಾಗಿತ್ತು. 

ಶನಿವಾರ ರಾತ್ರಿ ನೋವು ಕಾಣಿಸಿಕೊಂಡಿದೆ. ಕೂಡಲೇ ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ಆ್ಯಂಬುಲೆಸ್ಸ್‌ ವ್ಯವಸ್ಥೆ ಮಾಡಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಲ್ಲಿ ಸೋಂಕಿತ ಗರ್ಭಿಣಿ ಹೆರಿಗೆ ಅವಕಾಶ ಇಲ್ಲ, ಕೊಪ್ಪಳ ಆಸ್ಪತ್ರೆಗೆ ಹೋಗಬೇಕೆಂದು ವೈದ್ಯರು ಸೂಚಿಸಿದ್ದಾರೆ. 

ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

ಕೊನೆಗೂ ರೆಡ್ಡಿ ಶ್ರೀನಿವಾಸ ಮನವರಿಕೆ ಮಾಡಿ ದಾಖಲಿಸಿದ್ದಾರೆ. ಆನಂತರ ಗಿರಿಜಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona