Covid19| ಕೊರೋನಾ ಸೋಂಕು ಮುಕ್ತ ಹಾವೇರಿ ಜಿಲ್ಲೆ..!

*   18 ತಿಂಗಳ ಬಳಿಕ ಜಿಲ್ಲೆಯಲ್ಲಿ ಶೂನ್ಯ ಸಕ್ರಿಯ ಕೇಸ್‌
*   ಇದುವರೆಗೆ 650 ಜನರು ಕೊರೋನಾಕ್ಕೆ ಬಲಿ
*   ಮಾರ್ಗಸೂಚಿ ಪಾಲಿಸುವುದು ಸಾರ್ವಜನಿಕರ ಕರ್ತವ್ಯ
 

Corona Free Haveri District grg

ನಾರಾಯಣ ಹೆಗಡೆ

ಹಾವೇರಿ(ನ.13):  ಬರೋಬ್ಬರಿ 18 ತಿಂಗಳ ಬಳಿಕ ಜಿಲ್ಲೆ ಕೊರೋನಾ(Coronavirus) ಸೋಂಕು ಮುಕ್ತಗೊಂಡಿದೆ. ಕೋವಿಡ್‌ ಸಕ್ರಿಯ ಪ್ರಕರಣ ಶೂನ್ಯಕ್ಕೆ ಇಳಿದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

2020ರ ಮೇ 5ರಂದು ಸವಣೂರಿನಲ್ಲಿ(Savanur) ಮೊದಲ ಕೇಸ್‌ ಕಾಣಿಸಿಕೊಂಡು 18 ತಿಂಗಳ ಕಾಲ ಜನರನ್ನು ಹೈರಾಣಾಗಿಸಿದ್ದ ಕೊರೋನಾ ವೈರಸ್‌ ಅಂತೂ ಜಿಲ್ಲೆಯಿಂದ(Haveri) ಸಂಪೂರ್ಣವಾಗಿ ತೊಲಗಿದಂತಾಗಿದೆ. ಇದುವರೆಗೆ 22201 ಜನರಿಗೆ ಸೋಂಕು ತಗುಲಿ, 650 ಜನರನ್ನು ಬಲಿತೆಗೆದುಕೊಂಡು ಜಿಲ್ಲೆಯ ಆರ್ಥಿಕತೆಯನ್ನೇ ಕೊರೋನಾ ಬುಡಮೇಲು ಮಾಡಿತ್ತು. ಒಂದು ಮತ್ತು ಎರಡನೇ ಅಲೆಯಿಂದ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಹಾನಗಲ್ಲ(Hanagal)  ಉಪಚುನಾವಣೆ(Byelection), ದೀಪಾವಳಿ(Deepavali) ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಜನರು ಗುಂಪು ಸೇರಿದ್ದರೂ ಜಿಲ್ಲೆಯಲ್ಲಿ ಕೊರೋನಾ ಮುಕ್ತಗೊಂಡಿರುವುದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

22201 ಕೇಸ್‌ಗೆ ಕ್ಲೋಸ್‌

ಕೊರೋನಾ ಒಂದು ಮತ್ತು ಎರಡನೇ ಅಲೆ ಸೇರಿ ಜಿಲ್ಲೆಯಲ್ಲಿ 22201 ಕೊರೋನಾ ಪ್ರಕರಣ ದೃಢಪಟ್ಟಿವೆ. ಇದುವರೆಗೆ 650 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ(Death). 21551 ಜನರು ಕೊರೋನಾ ಸೋಂಕು ತಗುಲಿ ಸೂಕ್ತ ಚಿಕಿತ್ಸೆ(Treatment) ಪಡೆದು ಗುಣಮುಖರಾಗಿದ್ದಾರೆ.

CovidVaccine| 2ನೇ ಡೋಸ್ ಲಸಿಕೆ ಕಡ್ಡಾಯ ಮಾಡಿ: ತಜ್ಞರು

ರಾಣಿಬೆನ್ನೂರು(Ranibennru) ತಾಲೂಕಿನಲ್ಲಿ ಅತ್ಯಧಿಕ 5352 ಜನರಿಗೆ ಕೊರೋನಾ ತಗಲಿತ್ತು. ಹಾವೇರಿ ತಾಲೂಕಿನಲ್ಲಿ 4847 ಕೇಸ್‌ ದೃಢಪಟ್ಟಿದ್ದರೆ, ಬ್ಯಾಡಗಿ(Byadagi) ತಾಲೂಕಿನಲ್ಲಿ 2060, ಹಾನಗಲ್ಲ ತಾಲೂಕಿನಲ್ಲಿ 2803 ಪ್ರಕರಣ ದೃಢಪಟ್ಟಿವೆ. ಹಿರೇಕೆರೂರು(Hirekerur) ತಾಲೂಕಿನಲ್ಲಿ 3061, ಸವಣೂರು ತಾಲೂಕಿನ 1306 ಜನರಿಗೆ, ಶಿಗ್ಗಾಂವಿ(Shiggon) ತಾಲೂಕಿನ 2542 ಜನರಿಗೆ ಕೊರೋನಾ ಸೋಂಕು ತಗಲಿತ್ತು. ಇತರೆ 230 ಕೇಸ್‌ ದಾಖಲಾಗಿದ್ದವು.

650 ಜನರ ಸಾವು

ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 650 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು(Childre), ವೃದ್ಧರು, ಮಹಿಳೆಯರು(Women), ಯುವಕರು(Youths) ಸೇರಿದಂತೆ ಯಾರನ್ನೂ ಕೊರೋನಾ ಬಿಟ್ಟಿರಲಿಲ್ಲ. ಕೊರೋನಾ ಸೋಂಕು ಬಂದರೆ ಸಾವು ನಿಶ್ಚಿತ ಎಂಬ ರೀತಿಯಲ್ಲಿ ಜನರು ಆತಂಕಗೊಂಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಿದ ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಆದರೂ ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ(Death Ratio) ಜಿಲ್ಲೆಯಲ್ಲಿ ಹೆಚ್ಚಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಆಕ್ಸಿಜನ್‌(Oxygen) ಕೊರತೆ, ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೇ ಇರುವುದು, ಸೋಂಕು ತಗಲಿದರೂ ಆಸ್ಪತ್ರೆಗೆ ಬಾರದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಜನರು ಕೊರೋನಾದಿಂದ ತತ್ತರಿಸಿದ್ದರು. ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಹುಡುಕಲೆಂದೇ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ತಜ್ಞರ ಸಮಿತಿ ವರದಿ ನೀಡಿತ್ತು. ಆದರೂ ಸಾವಿನ ಸಂಖ್ಯೆ ಏರುತ್ತಲೇ ಇತ್ತು. ಅಂತೂ ಈಗ ಸಾವಿನ ಸರಣಿಗೆ ಬ್ರೇಕ್‌ ಬಿದ್ದಂತಾಗಿದೆ.

ಜಿಲ್ಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ 194 ಜನರು ಕೊರೋನಾ ಗುಣಮುಖರಾಗದೇ ಕೊನೆಯುಸಿರೆಳೆದಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 59, ಹಾನಗಲ್ಲ ತಾಲೂಕಿನಲ್ಲಿ 69, ರಾಣಿಬೆನ್ನೂರು 144, ಹಿರೇಕೆರೂರು 78, ಸವಣೂರು 42, ಶಿಗ್ಗಾಂವಿ 57 ಹಾಗೂ ಇತರೆ 7 ಜನರು ಸೇರಿದಂತೆ 650 ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ.

ಕೊರೊನಾ : ವಿಶ್ವಕ್ಕೆ ಈಗಲೂ ಡೆಲ್ಟಾ ಕಂಟಕ

ಸದ್ಯ ಜಿಲ್ಲೆ ಕೊರೋನಾ ಮುಕ್ತಗೊಂಡಿದ್ದು, ಸಂಭಾವ್ಯ ಮೂರನೇ ಅಲೆ ಬಗ್ಗೆ ಆತಂಕ ದೂರವಾಗಿದೆ. ಆದರೆ, ಶಾಲಾ(Schools) ಕಾಲೇಜುಗಳು(Colleges) ಶುರುವಾಗಿವೆ. ಎಲ್ಲೆಡೆ ಹಬ್ಬ, ಜಾತ್ರೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಒಂದರ ಮೇಲೊಂದರಂತೆ ಚುನಾವಣೆಗಳು(Election) ನಡೆಯುತ್ತಿದ್ದು, ಪ್ರಚಾರದ ವೇಳೆ ಸಾವಿರಾರು ಜನರು ಸೇರುತ್ತಿದ್ದಾರೆ.

ಆತಂಕದ ವಿಷಯವೆಂದರೆ ಜನರು ಮಾಸ್ಕ್‌(Mask), ಸಾಮಾಜಿಕ ಅಂತರವನ್ನು(Social Distance) ಸಂಪೂರ್ಣವಾಗಿ ಮರೆತಿದ್ದಾರೆ. ಕೊರೋನಾ ದೂರವಾಯಿತು ಎಂದು ಮಾಸ್ಕ್‌ ಧರಿಸುವುದನ್ನು ಜನರು ಕೈಬಿಟ್ಟಿದ್ದಾರೆ. ಆರ್ಥಿಕ ಚಟುವಟಿಕೆ ಸೇರಿದಂತೆ ಎಲ್ಲವೂ ಕೊರೋನಾ ಪೂರ್ವದ ದಿನಗಳಿಗೆ ಮರಳಿರುವುದು ನೆಮ್ಮದಿಯ ಸಂಗತಿಯಾಗಿದೆ. ಇನ್ನು ಮುಂದೆ ಕೊರೋನಾ ಸೋಂಕು ಮತ್ತೆ ಜಿಲ್ಲೆಗೆ ಕಾಲಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ಒಂದು ತಿಂಗಳಿಂದ ಹೊಸ ಕೇಸ್‌ ಬಂದಿರಲಿಲ್ಲ. ಈಗ ಸಕ್ರಿಯ ಕೇಸ್‌ ಶೂನ್ಯಕ್ಕೆ ಇಳಿದಿದೆ. ಆದರೂ ನಾವು ಕೊರೋನಾ ಟೆಸ್ಟ್‌(Covid Test) ಮಾಡುವುದನ್ನು ಬಂದ್‌ ಮಾಡಿಲ್ಲ. ನಿತ್ಯವೂ 2500 ಟೆಸ್ಟ್‌ ಮಾಡುತ್ತಿದ್ದೇವೆ. ಇನ್ನೂ ಶೇ.15ರಷ್ಟು ಜನರು ವ್ಯಾಕ್ಸಿನೇಶನ್‌(Vaccination) ತೆಗೆದುಕೊಳ್ಳುವುದು ಬಾಕಿಯಿದೆ. ಸೆಕೆಂಡ್‌ ಡೋಸ್‌ ನೀಡುವ ಕಾರ್ಯ ಇನ್ನಷ್ಟು ಚುರುಕಾಗಿ ಮಾಡಲಾಗುತ್ತಿದೆ. ಕೊರೋನಾ ಹೋಯಿತೆಂದು ಮೈಮರೆಯದೇ ಮಾರ್ಗಸೂಚಿ ಪಾಲಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ಹಾವೇರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios