ಮಾಗಡಿ (ಆ.25):  ಕೊರೋ​ನಾಗೆ ಹೆದರಿ ಮಗ ಸಾವ​ನ್ನ​ಪ್ಪಿ​ದರೆ, ತಂದೆ ಹೃದ​ಯಾ​ಘಾ​ತ​ದಿಂದ ಮೃತ​ಪ​ಟ್ಟಿ​ರುವ ದುರಂತ ಘಟನೆ ಪಟ್ಟ​ಣದ ತಿರು​ಮ​ಲೆ​​ ಹೊಸ ಬಡಾ​ವ​ಣೆ​ಯಲ್ಲಿ ನಡೆ​ದಿದೆ.

ತಿರು​ಮ​ಲೆ​​ ಹೊಸ ಬಡಾವಣೆ ವಾಸಿ ಶಂಕರಪ್ಪ (68) ಹಾಗೂ ಅವರ ಪುತ್ರ ವೇಣುಗೋಪಾಲ (40) ಮೃತರು.

ಶಂಕರಪ್ಪ ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿ ಇದ್ದಾರೆ. ಪುತ್ರ ವೆಣುಗೋಪಾಲ ಅವರಿಗೆ ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ರಾರ‍ಯಪಿಡ್‌ ಅ್ಯಂಟಿಜನ್‌ ಟೆಸ್ವ್‌ ನಡೆಸಿದಾಗ ನೆಗೆಟಿವ್‌ ವರದಿ ಬಂದಿದೆ.

ಗುಡ್ ನ್ಯೂಸ್: ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು..!

ಉಸಿರಾಟದ ತೊಂದರೆ ಹೆಚ್ಚಾಗಿದ್ದ ಕಾರಣ ವೇಣುಗೋಪಾಲ್‌ ಅವ​ರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10 ಗಂಟೆಯ ಸಮಯದಲ್ಲಿ ವೇಣುಗೋಪಾಲ ತಮ್ಮ ಸಂಬಂಧಿಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ನಾನು ಚೆನ್ನಾಗಿ ಇದ್ದೇನೆ ಸ್ವಲ್ಪ ಉಸಿರಾಟದ ತೊಂದರೆ ಮಾತ್ರ ಇದೆ ಎಂದು ಹೇಳಿಕೊಂಡಿದ್ದಾರೆ. ಆ​ದ​ರೆ, ರಾತ್ರಿ 1.30 ರ ಸಮಯದಲ್ಲಿ ಕೊನೆ​ಯು​ಸಿ​ರೆ​ಳೆ​ದಿ​ದ್ದಾರೆ.

ಇತ್ತ ಮನೆಯಲ್ಲಿದ್ದ ಶಂಕರಪ್ಪ ಅವರಿಗೆ ರಾತ್ರಿ ಪೂರಾ ಮಗನದೇ ಚಿಂತೆಯಾಗಿದ್ದು, ಸರಿಯಾಗಿ ನಿದ್ದೆ ಮಾಡಿ​ರಲಿಲ್ಲ. ಸೋಮವಾರ ಬೆಳಿಗ್ಗೆ ಮನೆಯಲ್ಲಿ ಉಪಹಾರ ಸೇವಿಸಿದ ಶಂಕರಪ್ಪ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಳಿಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ.ಗನ ಸಾವಿನ ಸುದ್ದಿಯನ್ನು ಯಾರೂ ಸಹ ಶಂಕರಪ್ಪ ಅವರಿಗೆ ತಿಳಿಸಿರ​ಲಿಲ್ಲ. ಮಗನ ಕೊರಗಿನಲ್ಲಿ ಶಂಕರಪ್ಪ ಸಹ ಮಗ ಕೊನೆ​ಯು​ಸಿ​ರೆ​ಳೆದ ಕೆಲವೇ ಗಂಟೆಗಳಲ್ಲಿ ಮರಣ ಹೊಂದಿದ್ದು, ಒಂದೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ.