Asianet Suvarna News Asianet Suvarna News

'ತುಳುನಾಡ ದೈವಾರಾಧಕರಿಗೆ ತಟ್ಟಿದ ಬಿಸಿ : ನೆರವಿಗೆ ಮೊರೆ'

ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ತುಳುನಾಡು ದೈವಾರಾಧಕರಿಗೂ ಈ ಬಿಸಿ ತಟ್ಟಿದೆ. ಆದ್ದರಿಂದ ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

corona effect tulunadu people urges for help from govt
Author
Bengaluru, First Published Aug 28, 2020, 10:43 AM IST

ಉಡುಪಿ (ಆ.28):  ಉಡುಪಿ ಜಿಲ್ಲಾ ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟದ ವತಿಯಿಂದ ಅಗತ್ಯ ನೆರವು ನೀಡುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

 ಅತಂತ್ರರಾಗಿರುವ ತುಳುನಾಡಿನ ಎಲ್ಲಾ ದೈವಾರಾಧಕರಿಗೆ ಕೊವಿಡ್ ಪ್ಯಾಕೇಜ್ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಲಾಯಿತು.

ಅಂದು ಪರಿಹಾರಕ್ಕಾಗಿ ಜಗಳವಾಡಿದ್ದ ತಲಕಾವೇರಿ ಅರ್ಚಕರ ಮಕ್ಕಳ ಮತಾಂತರದ ವಿಷ್ಯ ರಟ್ಟು

ಕೊರೋನಾ ತುರ್ತು ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗೆ ಮನವಿ ನೀಡಿ, ದೈವ ಚಾಕ್ರಿ ವರ್ಗದವರಿಗೆ ವಿಶೇಷ ಪ್ಯಾಕೇಜು ಹಾಗೂ ದೈವಾರಾಧನೆಗಳನ್ನು 150 ಜನರನ್ನು ಸೇರಿಸಿ ನಡೆಸುವುದಕ್ಕೆ ಅವಕಾಶ ನೀಡಬೇಕು ಎಂದು  ಮನವಿ ನೀಡಿದ್ದರೂ ಸರ್ಕಾರದಿಂದ ಸ್ಪಂದನೆ  ದೊರೆತಿಲ್ಲ. ಅದ್ದರಿಂದ ವಿರೋಧ ಪಕ್ಷದ ವತಿಯಿಂದ ತಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದು  ಮನವಿಯಲ್ಲಿ ವಿನಂತಿಸಿಸಲಾಗಿದೆ.

ತಲ​ಕಾ​ವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು:​ ಚೆಕ್‌ ವಾಪ​ಸ್.

ದೈವಾರಾದಕರ ಮನವಿಗೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅಗತ್ಯ ನೆರವಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ಈ ವೇಳೆ ಒಕ್ಕೂಟದ ಪ್ರ.ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷರಾದ ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಕಾಪು ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ, ಸದಸ್ಯರಾದ ದಯೆಶಾ ಕೊಟ್ಯಾನ್, ಸುನಿಲ್ ಕುಮಾರ್, ಸಂತೋಷ್ ದೇವಾಡಿಗ, ನಿತ್ಯಾನಂದ, ಸೂರ್ಯಕಾಂತ ದೇವಾಡಿಗ, ರಕ್ಷಿತ್ ಮುಂತಾದವರಿದ್ದರು.

Follow Us:
Download App:
  • android
  • ios