ಬೆಂಗಳೂರು (ಅ.20) : ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಸೋಮವಾರ 2,481 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ.

ಕಳೆದ ಒಂದು ವಾರದಿಂದ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಸೋಮವಾರ ನಗರದಲ್ಲಿ 2,481 ಹೊಸ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 1,509 ಪುರುಷ ಹಾಗೂ 972 ಮಹಿಳಾ ಸೋಂಕಿತರಾಗಿದ್ದಾರೆ. ಈವರೆಗೆ ನಗರದಲ್ಲಿ 3,10,021 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 2,41,942 ಜನರು ಗುಣಮುಖರಾಗಿದ್ದಾರೆ.

ಗುಡ್‌ ನ್ಯೂಸ್: ರಾಜ್ಯದಲ್ಲಿ ತಗ್ಗಿದ ಕೊರೋನಾ: ಇಲ್ಲಿದೆ ಸೋಮವಾರದ ಅಂಕಿ-ಸಂಖ್ಯೆ .

ಸೋಮವಾರ 2,363 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 64,536 ಸಕ್ರಿಯ ಪ್ರಕರಣಗಳಿದ್ದು, 364 ಮಂದಿ ನಗರದ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

17 ಮಂದಿ ಮೃತಪಡುವುದರೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 3,542ಕ್ಕೆ ಏರಿಕೆಯಾಗಿದೆ.

ಕಳೆದ 10 ದಿನದಲ್ಲಿ 37 ಸಾವಿರ ಸೋಂಕು: ದಿನ ಐದು ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದ ಬೆಂಗಳೂರಿನಲ್ಲಿ ಕಳೆದ 10 ದಿನದಿಂದ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖರಾಗಿದ್ದು, ಅ.10 ರಿಂದ ಅ.19ರ ಅವಧಿಯಲ್ಲಿ ಒಟ್ಟು 37,650 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. ಇದೇ ಅವಧಿಯಲ್ಲಿ 34,966 ಗುಣಮುಖರಾಗಿದ್ದು, 252 ಮಂದಿ ಮೃತಪಟ್ಟಿದ್ದಾರೆ.

 ಸೋಂಕಿ ಪತ್ತೆ ಮತ್ತು ಗುಣಮುಖ ವಿವರ

ದಿನಾಂಕ ಹೊಸ ಸೋಂಕು ಗುಣಮುಖ

ಅ.10 4,563 1,726

ಅ.11 4,623 2,656

ಅ.12 3,498 5,764

ಅ.13 3,776 4,529

ಅ.14 4,574 3,291

ಅ.15 3,788 3,520

ಅ.16 3,441 3,021

ಅ.17 3,371 4,251

ಅ.18 3,535 3,845

ಅ.19 2,481 2,363