ಮಂಡ್ಯ (ಸೆ.27): ಮಂಡ್ಯ ಜಿಲ್ಲೆ ಕೊರೋನಾ ಸೋಂಕು ಪ್ರಕರಣದಲ್ಲಿ 10 ಸಾವಿರ ಗಡಿ ದಾಟಿದೆ.

ಶನಿವಾರ ಜಿಲ್ಲೆಯಲ್ಲಿ 259 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 103 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 10,053 ಮಂದಿಗೆ ಸೋಂಕು ತಗುಲಿದಂತಾಗಿದೆ. ಇದರಲ್ಲಿ 8399 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1551 ಪ್ರಕರಣಗಳು ಸಕ್ರಿಯವಾಗಿವೆ. ಹೊಸ ಪ್ರಕರಣಗಳಲ್ಲಿ ಮಂಡ್ಯ ತಾಲೂಕಿನಲ್ಲಿ 80, ಮದ್ದೂರು 25, ಮಳವಳ್ಳಿ 21, ಪಾಂಡವಪುರ 8, ಶ್ರೀರಂಗಪಟ್ಟಣ 27, ನಾಗಮಂಗಲ 56, ಕೆ.ಆರ್‌.ಪೇಟೆ 42 ಮಂದಿಗೆ ಸೋಂಕು ದೃಢಪಟ್ಟಿವೆ.
ಕೊರೋನಾ ನಿಯಮ ಉಲ್ಲಂಘನೆ ದಂಡ ಪ್ರಮಾಣ ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವನೆ .

ಸೋಂಕಿನಿಂದ 103 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ ತಾಲೂಕು 30, ಮದ್ದೂರು 5, ಮಳವಳ್ಳಿ 11, ನಾಗಮಂಗಲ 2, ಪಾಂಡವಪುರ 43, ಶ್ರೀರಂಗಪಟ್ಟಣ 9, ಕೆ.ಆರ್‌ .ಪೇಟೆ 3 ಮಂದಿ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಂಕಿನಿಂದ ಮಳವಳ್ಳಿ ತಾಲೂಕಿನ 42 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಉಸಿರಾಟ ಸಮಸ್ಯೆ ಹಾಗೂ ಇತರೆ ಆರೋಗ್ಯ ಸಮಸ್ಯೆದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
 
ಜಿಪಂ ಸದಸ್ಯ ತಿಮ್ಮೇಗೌಡ ಕೊರೋನಾ ಸೋಂಕಿಗೆ ಬಲಿ
  
ಕೊರೋನಾ ಸೋಂಕಿಗೆ ಒಳಗಾಗಿದ್ದ ಚಿಕ್ಕಾಡೆ ಜಿಪಂ ಸದಸ್ಯ ತಿಮ್ಮೇಗೌಡ (66) ಚಿಕಿತ್ಸೆ ಫಲಕರಿಸದೆ ಶನಿವಾರ ಸಾವನ್ನಪ್ಪಿದರು.

ಕಳೆದ ಹಲವು ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದ ತಿಮ್ಮೇಗೌಡರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಶನಿವಾರ ಬೆಳಗ್ಗೆ ಸಾವಪ್ಪಿದರು.

ಜೆಡಿಎಸ್‌ನಿಂದ ಚಿಕ್ಕಾಡೆ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಿಮ್ಮೇಗೌಡರು ಕ್ಷೇತ್ರದಾದಂತ್ಯ  ಓಡಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಕೊರೋನಾ ಸಮಸ್ಯೆ ಎದುರಾದಾಗಿನಿಂದಲೂ ಸಾಕಷ್ಟುಎಚ್ಚರಿಕೆಯಿಂದ ಇದ್ದರು.

ಆದರೆ, ಕೆಲ ದಿನಗಳ ಹಿಂದೆ ಸೋಂಕಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮೃತಪಟ್ಟರು. ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಮೃತ ತಿಮ್ಮೇಗೌಡ ಅಂತ್ಯಕ್ರಿಯೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಹೊರವಲಯದ ಸ್ವಂತ ಜಮೀನಿನಲ್ಲಿ ನಡೆಯಿತು.

ಮೃತ ತಿಮ್ಮೇಗೌಡರ ಅಂತ್ಯಕ್ರಿಯೆಯಲ್ಲಿ ಶಾಸಕ ಸಿ.ಎಸ್‌.ಪುಟ್ಟರಾಜು, ಜಿಪಂ ಸದಸ್ಯ ಸಿ.ಅಶೋಕ್‌, ತಹಸೀಲ್ದಾರ್‌ ಪ್ರಮೋದ್‌ ಎಲ….ಪಾಟೀಲ…, ಇಒ ಆರ್‌.ಪಿ.ಮಹೇಶ್‌, ಟಿಎಚ್‌ಒ ಡಾ.ಸಿ.ಎ.ಅರವಿಂದ್‌ ಸೇರಿದಂತೆ ತಾಪಂ, ಜಿಪಂ ಸದಸ್ಯರು ಸಾಮಾಜಿಕ ಅಂತರದಿಂದ ಅಂತಿಮ ದರ್ಶನ ಪಡೆದರು.