ಬೆಂಗಳೂರು(ಆ. 20)  ಈ ಬಾರಿಯ ಗಣೇಶ ಹಬ್ಬದ ಮೇಲೆ ಕೊರೋನಾ ಕರಿನೆರಳು ಆವರಿಸಿದೆ.  ಹಬ್ಬ ಅಂದ್ರೆ ಸಾಕು‌ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ ಖಾಲಿಖಾಲಿ ಹೊಡೆಯುತ್ತಿದೆ.

ಹಬ್ಬಕ್ಕೆ ಊರಿಗೆ ಹೋಗಲು ಜನರು ಮನಸ್ಸು ಮಾಡಿಲ್ಲ. ಮತ್ತೊಂದು ಕಡೆ ಲಾಕ್ ಡೌನ್ ನಿಂದ ಊರಿನಲ್ಲೆ ಸೆಟಲ್ ಆಗಿರೋ ವಲಸಿಗರು ಅಲ್ಲಿಯೇ ಇದ್ದಾರೆ. ಈ ಮಧ್ಯೆ ಗೌರಿ ಗಣೇಶ ಹಬ್ಬದ ಬಿಸಿನೆಸ್ ಇಲ್ಲದೆ KSRTC ಅನಿವಾರ್ಯವಾಗಿ ನಷ್ಟ ಅನುಭವಿಸಬೇಕಾಗಿದೆ.

ಅರ್ಧದಷ್ಟು ಜನರ ಆದಾಯ ಕಿತ್ತುಕೊಂಡ ಕೊರೋನಾ

ಮಾಮೂಲಿಗಿಂತಲೂ ಅತೀ ವಿರಳ ಸಂಖ್ಯೆಯಲ್ಲಿ ಮೆಜೆಸ್ಟಿಕ್ ಕಡೆ ಪ್ರಯಾಣಿಕರು ಬರುತ್ತಿದ್ದಾರೆ. ಖಾಲಿ ಖಾಲಿಯಾಗಿ ನಿಲ್ದಾಣದಲ್ಲೇ ಕೆಎಸ್ ಆರ್ ಟಿಸಿ ಬಸ್ ಗಳು ನಿಂತಿವೆ. ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಟೈಮ್‌ನಲ್ಲಿ‌ ವಿಶೇಷ ಬಸ್ ಗಳ ವ್ಯವಸ್ಥೆ ಮಾಡ್ತಾ ಇದ್ದ ಕೆಎಸ್ ಆರ್ ಟಿಸಿಗೆ ಈ ಬಾರಿ ಸಾಮಾನ್ಯ ಬಸ್ಸುಗಳಿಗೂ ಜನರಿಲ್ಲ.

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಬಸ್ ಸಂಚಾರವನ್ನು ಬಂದ್ ಮಾಡಲಾಗಿತ್ತು. ಆದರೆ ನಂತರ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಜನರು ಮಾತ್ರ ಸಾರ್ವಜನಿಕ ಸಾರಿಗೆಯಿಂದ ದೂರವೇ ಉಳಿದಿದ್ದಾರೆ. ಮೆಟ್ರೋ ಪ್ರಯಾಣಕ್ಕೆ ಇನ್ನು ಅವಕಾಶ ಸಿಕ್ಕಿಲ್ಲ. 

"