ಬೆಂಗ​ಳೂ​ರು(ಫೆ.17): ಕರ್ನಾ​ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಸಾರ್ಟಿಸಿ) ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಮನ್ವಯ ಕನ್ನಡ ಸಂಘ ಆಗ್ರ​ಹಿ​ಸಿದೆ.

ಶುಕ್ರ​ವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನಾಡೋಜ ಡಾ. ಮಹೇಶ್‌ ಮಾತ​ನಾಡಿ, ಕೆಎಸ್ಸಾರ್ಟಿಸಿ ಸಂಸ್ಥೆ​ಯಲ್ಲಿ ಚಾಲಕ, ನಿರ್ವಾಹಕ, ಮೆಕಾನಿಕಲ್ ಸಿಬ್ಬಂದಿ ಸೇರಿ​ದಂತೆ ಒಟ್ಟು 1.26 ಸಾವಿರ ನೌಕರರಿ​ದ್ದಾರೆ. ಅವ​ರಿಗೆ ಕಾರ್ಮಿಕ ಭದ್ರತೆ ಇಲ್ಲ. ಸರ್ಕಾರಿ ನೌಕರರು ಮತ್ತು ಸಾರಿಗೆ ಕಾರ್ಮಿಕರ ವೇತ​ನ​ದಲ್ಲಿ ತಾರ​ತಮ್ಯ ನೀತಿ ಅನು​ಸ​ರಿ​ಸ​ಲಾ​ಗು​ತ್ತಿದೆ. ಆದ್ದ​ರಿಂದ ಮುಂದಿನ ಬಜೆ​ಟ್‌​ನಲ್ಲಿ ರಾಜ್ಯ ಸರ್ಕಾರ ಆಂಧ್ರಪ್ರದೇ​ಶದ ಮಾದ​ರಿ​ಯಲ್ಲಿ ಸಾರಿಗೆ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಪ್ರಸ್ತಾವ ಸೇರಿ​ಸ​ಬೇ​ಕೆಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಲ್ಕು ಸಾರಿ​ಗೆ ನಿಗಮಗಳ ಕಾರ್ಮಿಕರನ್ನು ಸರ್ಕಾರದಲ್ಲಿ ವಿಲೀನ ಮಾಡುವ ಬಗ್ಗೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ನೀಡುವಂತೆ ನಿರ್ದೇಶಿ​ಸಿತ್ತು. ಆದರೆ ಐದು ತಿಂಗ​ಳಾ​ದರೂ ಈ ಬಗ್ಗೆ ಸಮಿತಿ ವರದಿ ನೀಡಿಲ್ಲ. ಆದ್ದ​ರಿಂದ ಸಮಿತಿ ರದ್ದು ಮಾಡಿ ಸಾರಿಗೆ ಕಾರ್ಮಿಕರ ಬೇಡಿಕೆಗಳಿಗೆ ತಕ್ಕಂತೆ ಅವ​ರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇ​ಕೆಂದು ಒತ್ತಾಯಿ​ಸಿ​ದ್ದಾರೆ.