Asianet Suvarna News Asianet Suvarna News

Vijayapura: ಗುಮ್ಮಟನಗರಿಯಲ್ಲಿ ತಾರಕಕ್ಕೇರಿದ ಗಣೇಶ ವಿಸರ್ಜನೆ ವಿವಾದ!

ಗುಮ್ಮಟನಗರಿ ವಿಜಯಪುರದ ಐತಿಹಾಸಿ ತಾಜ ಬಾವಡಿಯಲ್ಲಿ ಗಣೇಶ ವಿಸರ್ಜನೆ ವಿವಾದ ತಾರಕ್ಕೇರಿದೆ. ನಗರದ ಹೃದಯ ಭಾಗದಲ್ಲಿ ಇರುವ ತಾಜ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡುವಂತೆ ಅಭಿಯಾನ ಶುರುವಾಗಿದೆ. 

Controversy over Ganesha Visarjan in Vijayapura gvd
Author
First Published Aug 28, 2022, 3:23 PM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಆ.28): ಗುಮ್ಮಟನಗರಿ ವಿಜಯಪುರದ ಐತಿಹಾಸಿ ತಾಜ ಬಾವಡಿಯಲ್ಲಿ ಗಣೇಶ ವಿಸರ್ಜನೆ ವಿವಾದ ತಾರಕ್ಕೇರಿದೆ. ನಗರದ ಹೃದಯ ಭಾಗದಲ್ಲಿ ಇರುವ ತಾಜ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡುವಂತೆ ಅಭಿಯಾನ ಶುರುವಾಗಿದೆ. ಗಣೇಶ ಮಹಾಮಂಡಳದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ ಟ್ಯಾಗ್‌ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ.

#Open The Gate For Ganesh Visarjan ಅಭಿಯಾನ: ಹೌದು! ವಿಜಯಪುರ ನಗರದ ಐತಿಹಾಸಿಕ ತಾಜ್‌ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಬೇಕು ಅಂತಾ #Open The Gate For Ganesh Visarjan ಹ್ಯಾಶ್‌ ಟ್ಯಾಗ್‌ ಅಭಿಯಾನ ಶುರುವಾಗಿದೆ. ಗಣೇಶ ಮಹಾಮಂಡಳದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ಈ ವರ್ಷ ತಾಜ್‌ ಬಾವಡಿಯ ಗೇಟ್‌ ಓಪನ್‌ ಮಾಡಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲೇಬೇಕು ಅಂತಾ ಯುವಕರು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆ ಕೂಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ.

ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜ್ಞಾನಿಗಳು ಬಂದಾಗಲೇ ಕಂಪಿಸಿದ ಭೂಮಿ..!

ಯಾಕೆ ಈ ತಾಜ್‌ ಬಾವಡಿ ವಿವಾದ?: ತಾಜ ಬಾವಡಿಯಲ್ಲಿ ಈ ವರ್ಷ ಗಣೇಶ ವಿಸರ್ಜನೆ ಮಾಡಲಬೇಕು ಅನ್ನೋ ನಿರ್ಧಾರಕ್ಕೆ ಹಿಂದೂ ಸಂಘಟನೆಯ ಯುವಕರು, ಮಹಾಮಂಡಳದ ಯುವಕರು ಬಂದಿದ್ದಾರೆ. ನೀರು ಗಲೀಜಾಗುತ್ತೆ ಅನ್ನೋ ಕಾರಣವೊಡ್ಡಿ ಕಳೆದ 5 ವರ್ಷಗಳಿಂದ ಗಣೇಶ ವಿಸರ್ಜನೆಗೆ ಅವಕಾಶ ನಿರಾಕರಿಸುತ್ತಲೆ ಬಂದಿದ್ದಾರೆ. ಈ ವರ್ಷವು ಇದು ಮುಂದುವರೆದಿದ್ದು, ನಾವಿದನ್ನ ಒಪ್ಪೋದಿಲ್ಲ ಅಂತಾ ಗಣೇಶ ಮಹಾಮಂಡಳದ ಯುವಕರು ಪಟ್ಟು ಹಿಡಿದಿದ್ದಾರೆ. ಆದ್ರೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ನೀರನ್ನ ಶುದ್ಧಿಕರಿಸಲಾಗಿದೆ. ತಾಜ್‌ ಬಾವಡಿಯನ್ನ ಸ್ವಚ್ಛಗೊಳಿಸಲಾಗಿದೆ. ಹೀಗಾಗಿ ಅಲ್ಲಿ ನೀರು ಮಲೀನವಾಗಲು ಅವಕಾಶ ಕೊಡಲ್ಲ ಎನ್ತಿದ್ದಾರೆ. ಸ್ಥಳೀಯರ ವಿರೋಧವಿಲ್ಲ, ಬೇರೆ ಧರ್ಮಿಯರ ವಿರೋಧವಿಲ್ಲ, ಅಲ್ಲಿ ಗಣೇಶನನ್ನ ಹಾಕಿದ್ರೆ ಕೋಮುಸಾಮರಸ್ಯಕ್ಕು ಧಕ್ಕೆ ಇಲ್ಲ. ಪಾಲಿಕೆ ಯಾಕೆ ಅವಕಾಶ ನೀಡ್ತಿಲ್ಲ ಅಂತಾ ಯುವಕರು ಪ್ರಶ್ನೆ ಮಾಡ್ತಿದ್ದಾರೆ ಇದು ವಿವಾದ ಸೃಷ್ಟಿಸಿದೆ.

ಯಾವ ಹಿಂದೂ ಪಲ್ಲಕ್ಕಿ, ಗಂಗಾಪೂಜೆಗೂ ಇಲ್ಲ ಅವಕಾಶ: ಇನ್ನು ಇಲ್ಲಿ ಗಣೇಶ ವಿಸರ್ಜನೆ ಅಷ್ಟೆ ಅಲ್ಲ, ಯಾವುದೆ ಹಿಂದೂ ಪವಿತ್ರಕಾರ್ಯಗಳಿಗೂ ಇಲ್ಲಿ ಅವಕಾಶ ಇಲ್ಲ. ಹಿಂದೂ ಧಾರ್ಮಿಕ ಆಚರಣೆಗಳಾದ ಪಲ್ಲಕ್ಕಿ ಪೂಜೆ, ದೇವರ ಮೂರ್ತಿಗಳನ್ನ ತೊಳೆಯೋದಕ್ಕೆ ಧಾರ್ಮಿಕ ಕಾರ್ಯಕ್ಕೆ ಇಲ್ಲಿ ಅವಕಾಶವೇ ಇಲ್ಲ. ಹಳ್ಳಿಗಳಿಂದ ದೇವರ ಪಲ್ಲಕ್ಕಿ, ಮೂರ್ತಿಗಳು ಬಂದರೇ ತೊಳೆದು ಪೂಜೆ ಮಾಡಲು ಅವಕಾಶ ನೀಡ್ತಿಲ್ಲ ಅಂತಾ ಕೆಲ ಹಿಂದು ಪರ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಕೃತಕ ಹೊಂಡಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆ: ಪಾಲಿಕೆ ತಾಜ್‌ ಬಾವಡಿ ಬದಲಿಗೆ ಕೃತಕ ಹೊಂಡಗಳಲ್ಲಿ ಗಣೇಶ ವಿಸರ್ಜನೆಗೆ ಸೂಚಿಸಿದೆ. ಆದ್ರೆ ಇದಕ್ಕೆ ಹಿಂದೂ ಸಂಘಟನೆಗಳು ಒಪ್ಪುತ್ತಿಲ್ಲ. ಇದಕ್ಕೆ ಕಾರಣವು ಇದೆ, ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನ ವಿಸರ್ಜಿಸುವ ವೇಳೆ ಅವುಗಳು ಒಡೆದು ಹೋಗುತ್ವೆ. ಗಣೇಶ ಮೂರ್ತಿ ಒಡೆದರೆ ಅದು ನಮಗೆ ಅಪಶಕುನ. ಅಲ್ಲದೆ ಪಾಲಿಕೆ ಸಿಬ್ಬಂದಿ ಗಣೇಶ ಮೂರ್ತಿಗಳನ್ನ ಕೊಂಡೊಯ್ಯುವಾಗ ಅವುಗಳ ಮೇಲೆ ನಿಲ್ತಾರೆ ಅದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತೆ ಎಂದು ಮಹಾಮಂಡಳದ ಸನ್ನಿ ಗವಿಮಠ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಗೇಟ್‌ ತೆಗೆಯದೇ ಹೋದ್ರೆ ಮುರಿದು ನುಗ್ತಿವಿ: #Open The Gate For Ganesh Visarjan ಅಭಿಯಾನ ಶುರು ಮಾಡಿರುವ ಯುವಕರು ತಾಜ್‌ ಬಾವಡಿ ಗೇಟ್‌ ತೆರೆಯುವಂತೆ ಪಟ್ಟು ಹಿಡಿದ್ದಾರೆ. ಗೇಟ್‌ ತೆಗೆಯದೆ ಹೋದ್ರೆ ಗೇಟ್‌ ಮುರಿದು ಒಳಗೆ ನುಗ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಗೇಟ್‌ ಬೀಗ ಮುರಿದು ನುಗ್ಗಿ ಗಣೇಶ ವಿಸರ್ಜನೆ ಮಾಡ್ತೀವಿ ಯಾರ್‌ ಕೇಳ್ತಾರೆ ನೋಡ್ತೀವಿ ಎನ್ತಿದ್ದಾರೆ.

ಗೇಟ್‌ ಮುರಿದರೆ ಗೂಂಡಾ ಆಕ್ಟ್: ಈ ನಡುವೆ ವಿವಾದದಲ್ಲಿ ಮಧ್ಯಪ್ರವೇಶಿಸಿರುವ ಸ್ಥಳೀಯ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಾಜ್‌ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕೊಡಿ ಎನ್ತಿರೋರ ವಿರುದ್ಧ ಕಿಡಿಕಾರಿದ್ದಾರೆ. ತಾಜ್‌ ಬಾವಡಿಯಲ್ಲಿ ಗಣೇಶ ವಿಸರ್ಜನೆ ಮಾಡಿದವರ ವಿರುದ್ಧ ಗೂಂಡಾ ಆಕ್ಟ್‌ ಹಾಕ್ತೀವಿ ಎಂದಿದ್ದಾರೆ. ಗೇಟ್‌ ಮುರಿದ್ರೆ ಸುಮ್ಮನೆ ಬಿಡಲ್ಲಾ ಗೂಂಡಾ ಕಾಯ್ದೆ ಪಿಕ್ಸ್‌ ಎಂದಿದ್ದಾರೆ. ಈ ಹಿಂದೆ ಮೂರ್ನಾಲ್ಕು ಮಂದಿಯನ್ನ ಗೂಂಡಾ ಆಕ್ಟ್‌ನಲ್ಲಿ ಕಳಿಸಿದ್ದೀವಿ. ಈಗಲು ರೆಡಿ ಇದ್ದೀವಿ ಎನ್ನುವ ಮೂಲಕ ಉಗುರಿಗೆ ಹೋಗದಕ್ಕೆ ಕೊಡಲಿ ಎತ್ತಿದ್ದಾರೆ.

ತಾಜ್‌ ಬಾವಡಿಯನ್ನ ಸ್ವಚ್ಛಗೊಳಿಸಿದ್ದು ನಾವು ಎಂಬಿಪಿ: ಶಾಸಕ ಎಂ ಬಿ ಪಾಟೀಲ್‌ ಜಲಸಂಪನ್ಮೂಲ ಸಚಿವರಿದ್ದ ಸಮಯದಲ್ಲಿ ಕೆಲ ಐತಿಹಾಸಿಕ ಬಾವಡಿಗಳ (ಬಾವಿ) ಸ್ವಚ್ಛತಾ ಕಾರ್ಯ ನಡೆದಿತ್ತು. ಈ ವಿವಾದ ಬಗ್ಗೆಯು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್‌ ಆಗಲೇ ನಾವು ತಾಜ್‌ ಬಾವಡಿಯನ್ನ ಸ್ವಚ್ಛಗೊಳಿಸಿ ನೀರನ್ನ ಆಸ್ಪತ್ರೆ, ಕುಡಿಯಲು ಬಳಕೆ ಮಾಡಲು ಮೋಟಾರು ಅವಳಡಿಕೆ ಮಾಡಿ ಕೊಟ್ಟಿದ್ದೆ. ಮತ್ತೆ ನೀರು ಮಲೀನವಾಗೋದು ಬೇಡ ಎಂದಿದ್ದಾರೆ.

ವಿಜಯಪುರ: ಗೌರಿ ಗಣೇಶ ಹಬ್ಬ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಜಿಲ್ಲಾಸ್ಪತ್ರೆ, ಕುಡಿಯಲು ತಾಜ್‌ ಬಾವಡಿ ನೀರು ಬಳಕೆ: ಇತ್ತ ಹಿಂದೂ ಪರ ಸಂಘಟನೆಗಳು, ಗಣೇಶ ಮಹಾಮಂಡಳ ಯುವಕರು ತಾಜ್‌ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲೇ ಬೇಕು ಎನ್ತಿದ್ರೆ, ಇತ್ತ ಇಲ್ಲಿನ ನೀರನ್ನ ಶುದ್ಧಿಕರಿಸಿ ಜಿಲ್ಲಾಸ್ಪತ್ರೆ ಹಾಗೂ ಕುಡಿಯಲು ನೀಡಲಾಗ್ತಿದೆ. ಇಲ್ಲಿ ಗಣೇಶ ವಿಸರ್ಜನೆ ನಡೆದರೆ ನೀರು ಮಲಿನವಾಗಲ್ವಾ ಅಂತಾ ಕೆಲವರು ಪ್ರಶ್ನಿಸ್ತಿದ್ದಾರೆ. ಈ ವಾದ ಸರಿ ಇದೆ ಆದ್ರು, ಇದಕ್ಕೆ ಪ್ರತಿಯಾಗಿ ಮಹಾಮಂಡಳದ ಯುವಕರು ಹೇಳೊದು ಬೇರೆ. ಕಳೆದ 5 ವರ್ಷಗಳಿಂದ ಮಹಾನಗರ ಪಾಲಿಕೆ ಇದೆ ರೀತಿ ಹೇಳ್ತಿದೆ. ಆದ್ರೆ ಸಲಿಗೆ ಇಲ್ಲಿನ ನೀರನ್ನ ಬಳಕೆಯೇ ಮಾಡ್ತಿಲ್ಲ. ಆಸ್ಪತ್ರೆ, ಕುಡಿಯೋ ಕಾರಣಕ್ಕೂ ಇಲ್ಲಿನ ನೀರು ಬಳಕೆ ಆಗ್ತಿಲ್ಲ. ಇರೋ ನೀರು ಕೆಟ್ಟು ಹಸಿರು ಬಣ್ಣಕ್ಕೆ ತಿರುಗುತ್ತಿವೆ ಎಂದು ಗಂಭೀರ ಆರೋಪವನ್ನ ಹಿಂದು ಪರ ಸಂಘಟನೆಗಳ ಯುವಕರು, ಮಹಾಮಂಡಳದ ಯುವಕರು ಮಾಡ್ತಿದ್ದಾರೆ.

Follow Us:
Download App:
  • android
  • ios