ಮಂಗಳೂರು: ಮನಪಾ ಸಾಮಾನ್ಯ ಸಭೆಯಲ್ಲಿ ಮೊಳಗಿದ ವೀರ ಸಾವರ್ಕರ್ ಗೆ ಧಿಕ್ಕಾರ-ಜೈಕಾರ!
ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ಮನಪಾ ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಗಿ ಸಾವರ್ಕರ್‌ಗೆ ಧಿಕ್ಕಾರ-ಜೈಕಾರ ಘೋಷಣೆ ಕೂಗಿದ ಘಟನೆ ನಡೆದಿದೆ.
ಮಂಗಳೂರು (ಅ.29) : ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ಮನಪಾ ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಗಿ ಸಾವರ್ಕರ್‌ಗೆ ಧಿಕ್ಕಾರ-ಜೈಕಾರ ಘೋಷಣೆ ಕೂಗಿದ ಘಟನೆ ನಡೆದಿದೆ. ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರಿಡುವ ಕುರಿತು ಪ್ರಸ್ತಾಪಿಸಿದರು. ಈ ಬಗ್ಗೆ ಹಿಂದೆ ನಡೆದ ಸಾಮಾನ್ಹಯ ಸಭೆಯಲ್ಲಿ ಕಾರ್ಯಸೂಚಿ ಅಂಗೀಕಾರವಾಗಿತ್ತು. ಆದರೆ ಇಂದು ಸಭೆ ಆರಂಭವಾಗುತ್ತಿದ್ದಂತೆ ಮನಪಾ ಸದಸ್ಯ ನವೀನ್ ಡಿ'ಸೋಜ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಗದ್ದಲ ಉಂಟಾಗಿ ಕೆಲ ಕಾಲ ಸಭೆಯನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
Surathkal Toll Gate Issue: ಟೋಲ್ ಗೇಟ್ ಕಿತ್ತೆಸೆಯಲು ನಾಳೆ ನೇರ ಕಾರ್ಯಾಚರಣೆ!
ಯಾವುದೇ ಕಾರಣಕ್ಕೂ ವೀರ ಸಾವರ್ಕರ್ ಹೆಸರಿಡದಂತೆ ಸದನದ ಬಾವಿಗಿಳಿದು ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಸಭೆಯಲ್ಲೇ ಸಾವರ್ಕರ್ ಗೆ ಧಿಕ್ಕಾರ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಜೈಕಾರ ಕೂಗಲಾರಂಭಿಸಿದರು. ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಮಂಗಳೂರು ಪಾಲಿಕೆ ಮೇಯರ್ ಜಯಾನಂದ ಅಂಚನ್ ಸಭೆಯನ್ನು ಮುಂದೂಡಿದರು.
ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ನಾಮಕರಣ ಮಾಡುವಂತೆ ಕಳೆದ ವರ್ಷವೇ ಪಾಲಿಕೆಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದ್ದರು. ಆ ಬಳಿಕ ಕೌನ್ಸಿಲ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪ್ರಸ್ತಾವನೆ ಪಾಸ್ ಆಗಿತ್ತು.
ಸದ್ಯಸಾವರ್ಕರ್ ಹೆಸರಿಡೋ ಪ್ರಸ್ತಾವನೆ ಪಾಲಿಕೆ ಸ್ಥಾಯಿ ಸಮಿತಿ ಮುಂದಿದೆ. ಇನ್ನು ಕೆಲವೇ ದಿನಗಳಲ್ಲಿ ಪಾಲಿಕೆ ಮೂಲಕ ಸರ್ಕಾರದ ಅನುಮತಿಗೆ ರವಾನೆ ಆಗಬಹುದು. ಕೊನೆಯ ಹಂತದಲ್ಲಿರುವ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ತಯಾರಿ ನಡೆಸಿರುವ ಪಾಲಿಕೆ. ಅನುಮತಿ ಸಿಕ್ಕ ತಕ್ಷಣ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ನಾಮಕರಣ ಮಾಡಲು ಪ್ಲಾನ್. ಆದರೆ ಕಾಂಗ್ರೆಸ್ ಸದಸ್ಯರು ಯಾವುದೇ ಕಾರಣಕ್ಕೂ ಸಾವರ್ಕರ್ ಹೆಸರು ನಾಮಕರಣ ಮಾಡದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗ್ಳೂರು ಪಾಲಿಕೆ ಸುರತ್ಕಲ್ ವಲಯ ಕಚೇರಿ ಉದ್ಘಾಟನೆ