ಇಲ್ಲಿನ ಆಕಾಶವಾಣಿ ಬಡಾವಣೆಯಲ್ಲಿ ಗುರುವಾರ ಉಪನ್ಯಾಸಕರೊಬ್ಬರು ಆಯೋಜಿಸಿದ್ದ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ನೆಂಟರು, ಮಕ್ಕಳು ಸ್ನೇಹಿತರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆ ನೀಡುವ ಮೂಲಕ ಗಮನ ಸೆಳೆದರು.

ಹೊಸಪೇಟೆ (ಆ.24): ಇಲ್ಲಿನ ಆಕಾಶವಾಣಿ ಬಡಾವಣೆಯಲ್ಲಿ ಗುರುವಾರ ಉಪನ್ಯಾಸಕರೊಬ್ಬರು ಆಯೋಜಿಸಿದ್ದ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ನೆಂಟರು, ಮಕ್ಕಳು ಸ್ನೇಹಿತರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆ ನೀಡುವ ಮೂಲಕ ಗಮನ ಸೆಳೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಥಿಯೋಸಾಫಿಕಲ್‌ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ. ಕಿಚಡಿ ಚನ್ನಪ್ಪ(Dr kichadi channappa) ಅವರು ಭಾರತದ ಸಂವಿಧಾನ, ಇಂಗ್ಲೆಂಡ್‌ ಸಂವಿಧಾನ ಮತ್ತು ಸ್ವಿಡ್ಜಲೆಂರ್‍ಡ್‌ ಸಂವಿಧಾನದ ಪುಸ್ತಕಗಳನ್ನು ವಿತರಿಸಿದರು. ಸಮಾರಂಭಕ್ಕೆ ಆಗಮಿಸಿದ್ದ 300ಕ್ಕೂ ಹೆಚ್ಚು ಜನರಿಗೆ ಸಂವಿಧಾನದ ಪುಸ್ತಕಗಳನ್ನು ವಿತರಿಸಿ, ಸಂವಿಧಾನವನ್ನು ಅಧ್ಯಯನ ಮಾಡಿ, ತಮ್ಮ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿ ಹೇಳುವಂತೆ ತಲಾ ಒಬ್ಬರಿಗೆ ಐದು ಪುಸ್ತಕಗಳನ್ನು ನೀಡಿ ಮನವಿ ಮಾಡಿದರು.

ಉಪನ್ಯಾಸಕರ ವಿಶೇಷ ಪ್ರಯತ್ನಕ್ಕೆ ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸಿದರು 

ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಲು ಹೀಗ್ಮಾಡಿ..