Asianet Suvarna News Asianet Suvarna News

'ಕಾನ್ಸ್‌ಟೇಬಲ್‌ ಡಿಜಿಪಿಗೂ ಸಲಹೆ ನೀಡಬಹುದು'

ಕಾನ್ಸ್‌ಟೇಬಲ್‌ ಡಿಜಿಪಿ ಅವರಿಗೂ ಸಲಹೆ ನೀಡಬಹುದು ಎಂದರೆ, ಅಷ್ಟರಮಟ್ಟಿಗೆ ಅವರು ವೃತ್ತಿ ಬದ್ಧತೆಯನ್ನು ಮೆರೆಯಬೇಕು. ಅವರೂ ಕೂಡ ಮೇಲಾಧಿಕಾರಿಗೆ ಸಲಹೆ ನೀಡಬಹುದು ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್‌  ಹೇಳಿದರು. 

Constables can advise DGP Says  IGP Chandrashekar snr
Author
Bengaluru, First Published Apr 22, 2021, 11:38 AM IST

 ತುಮಕೂರು (ಏ.22):  ಪೊಲೀಸ್‌ ಕಾನ್‌ಸ್ಟೇಬಲ್‌ ಆದವರೂ ಪೊಲೀಸ್‌ ಮಹಾನಿರ್ದೇಶಕರಿಗೂ (ಡಿಜಿಪಿ) ಸಲಹೆ ನೀಡಬಹುದು ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ಅವರು ತುಮಕೂರಿನ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ ವತಿಯಿಂದ ಏರ್ಪಡಿಸಿದ್ದ 10ನೇ ತಂಡದ ನಾಗರಿಕ ಮತ್ತು ಕೆಎಸ್‌ಐಎಸ್‌ಎಫ್‌ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾನ್ಸ್‌ಟೇಬಲ್‌ ಡಿಜಿಪಿ ಅವರಿಗೂ ಸಲಹೆ ನೀಡಬಹುದು ಎಂದರೆ, ಅಷ್ಟರಮಟ್ಟಿಗೆ ಅವರು ವೃತ್ತಿ ಬದ್ಧತೆಯನ್ನು ಮೆರೆಯಬೇಕು ಎಂಬುದು ಗಮನಾರ್ಹ ಎಂದು ಚಂದ್ರಶೇಖರ್‌ ತಿಳಿಸಿದರು.

ಉತ್ತಮ ಕಾರ‍್ಯಗಳತ್ತ ಚಿತ್ತ ಹರಿಸಿ:  ನಮ್ಮ ಬದುಕಿನಲ್ಲಿ ಯಾವುದೇ ರೀತಿಯ ಒತ್ತಡ ಇದ್ದರೂ ಎಲ್ಲವನ್ನು ಸಹಿಸಿಕೊಂಡು ಉತ್ತಮ ಕಾರ್ಯಗಳತ್ತ ಚಿತ್ತ ಹರಿಸಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ. ವೃತ್ತಿಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ನಮ್ಮ ಹೆಸರು ಸತ್ತ ಮೇಲೂ ಚಿರಸ್ಥಾಯಿಯಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉತ್ತಮ ಕೆಲಸ ಮಾಡಲು ಮುಂದಾಗಬೇಕು ಎಂದು ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಬದುಕಿನಲ್ಲಿ ಉತ್ತಮ ಕೆಲಸ ಮಾಡಿ:  ನಮಗೆ ಸಾಯಲೇಬಾರದು ಎಂದು ನಮ್ಮ ಮನಸ್ಸಿನಲ್ಲಿರುತ್ತದೆ. ಆದರೆ ಗರಿಷ್ಠ ಎಂದರೆ 80 ರಿಂದ 100 ವರ್ಷ ಬದುಕುಬಹುದು. ಆ ನಂತರವಾದರೂ ನಾವು ತೀರಿ ಹೋಗಲೇಬೇಕಾಗುತ್ತದೆ. ಇದನ್ನು ಅರಿತು ನಾವೆಲ್ಲರೂ ವೃತ್ತಿ ಬದುಕಿನಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ಇಲಾಖೆಗೆ ಹಾಗೂ ವೈಯಕ್ತಿಕವಾಗಿ ನಮಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.

ನಾವು ಸತ್ತ ನಂತರವೂ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ನಾವು ಮಾಡಿರುವಉತ್ತಮ ಕೆಲಸಗಳಿಂದ ಮಾತ್ರ.ಆಗ ನಾವು ಸತ್ತಿದ್ದರೂ ಬದುಕ್ಕಿದ್ದಂತೆಯೇ ಎಂದು ಚಂದ್ರಶೇಖರ್‌ ಹೇಳಿದರು.\

ತ್ರಿಬಲ್ ರೈಡಿಂಗ್ ಟ್ರೋಲ್ ಮಾಡಿದ ಪೊಲೀಸರು: ವಿಡಿಯೋ ವೈರಲ್ .

ತರಬೇತಿ ಅವಧಿಯಲ್ಲಿ ತರಬೇತುದಾರರು ಹೇಳಿಕೊಡುವ ಪ್ರತಿಯೊಂದು ವ್ಯಾಯಾಮವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಾಗಿರಬಹುದು.ಇದನ್ನುಯಾರೂ ಸಹ ನಿರ್ಲಕ್ಷ್ಯ ಮಾಡಬಾರದು ಎಂದು ಐಜಿಪಿ ಕಿವಿಮಾತು ಹೇಳಿದರು.

ಜೀವನ ಯಶಸ್ವಿಯಾಗಲಿ:  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ತರಬೇತಿ ಪಡೆದು ಘಟಕಗಳಿಗೆ ವರದಿ ಮಾಡಿಕೊಳ್ಳಲು ತೆರಳುತ್ತಿರುವ ಪ್ರಶಿಕ್ಷಣಾರ್ಥಿಗಳ ವೃತ್ತಿಜೀವನ ಹಾಗೂ ವೈಯುಕ್ತಿಕಜೀವನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ತರಬೇತಿ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

Follow Us:
Download App:
  • android
  • ios