ಸತೀಶ್‌ ಜಾರಕಿಹೂಳಿ ಕೊಲೆಗೆ ಸಂಚು| ಕಳೆದ 6-7ವರ್ಷಗಳ ಹಿಂದೆ ಗೋಕಾಕ್‌ನಲ್ಲಿ ದಲಿತ ಯುವಕನ್ನು ಹತ್ಯೆ ಮಾಡಿ ಬಂಧನಕ್ಕೊಳಗಾಗಿದ್ದ 9 ಜನ ಆರೋಪಿಗಳ ವಿಚಾರಣೆಯಲ್ಲಿ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಬಂಧಿಸಿದ ಸ್ಫೋಟಕ ಸತ್ಯ ಬಯಲು| 

ಮಾನ್ವಿ(ಸೆ.11): ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಚು ರೂಪಿಸಿರುವ ವಿಷಯ ಬಯಲಾಗಿದ್ದು ಈ ಸಂಚಿನ ಹಿಂದೆ ಇರುವ ಕಾಣದ ವ್ಯಕ್ತಿಗಳ ಪತ್ತೆಗೆ ಸರ್ಕಾರ ಮುಂದಾಗಬೇಕೆಂದು ಮಾನವ ಬಂಧುತ್ವ ವೇದಿಕೆ ಮುಖಂಡ ನರಸಿಂಹನಾಯಕ ಕರಡಿಗುಡ್ಡ ಆಗ್ರಹಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠೀಯನ್ನುದ್ದೇಶಿಸಿ ಮಾತನಾಡುತ್ತ. ಕಳೆದ 6-7ವರ್ಷಗಳ ಹಿಂದೆ ಗೋಕಾಕ್‌ನಲ್ಲಿ ದಲಿತ ಯುವಕನ್ನು ಹತ್ಯೆ ಮಾಡಿ ಬಂಧನಕ್ಕೊಳಗಾಗಿದ್ದ 9 ಜನ ಆರೋಪಿಗಳ ವಿಚಾರಣೆಯಲ್ಲಿ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಬಂಧಿಸಿದ ಸ್ಫೋಟಕ ಸತ್ಯ ಬಯಲಾಗಿದೆ ಎಂದರು.

ಡ್ರಗ್ಸ್‌ ಮಾಫಿಯಾ ಬೆಳೆಯಲು ಇಂದಿನ, ಹಿಂದಿನ ಸರ್ಕಾರಗಳು ಕಾರಣ: ಜಾರಕಿಹೊಳಿ

ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಯಲ್ಲಿ ಈಗ ಸಧ್ಯ ಬಾಗಲಕೋಟೆ ಜೈಲ್‌ನಲ್ಲಿರುವ ಆರೋಪಿ ಹಾಗೂ ಟೈಗರ್‌ ಗ್ಯಾಂಗ್‌ನ ಮುಖಂಡ ನಾಗರಾಜ ಜಂಬಗಿ ಬರೆದಿರುವ ದಿನಚರಿಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಈ ಟೈಗರ್‌ ಗ್ಯಾಂಗ್‌ನ ಮಾಸ್ಟರ್‌ ಮೈಂಡ್‌ ಜೈಲ್‌ನಲ್ಲಿದ್ದುಕೊಂಡು ಸತೀಶ ಜಾರಕಿಹೂಳಿ ಹತ್ಯೆಗೆ ಫ್ಲ್ಯಾನ್‌ ನಡೆಸಿದ್ದಾನೆ.

ನಾಗರಾಜ ಜಂಬಗಿ ನೇತೃತ್ವದ ತಂಡವು ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಅನೇಕ ಕುಕೃತ್ಯಗಳಲ್ಲಿ ಭಾಗಿಯಾಗಿದ್ದು ಈ ಎಲ್ಲಾ ಆರೋಪಿಗಳಿಂದ ಇನ್ನೂ ಮಹತ್ತರವಾದ ಸತ್ಯಾಸತ್ಯತೆ ಹೂರಬರಲು ಸೂಕ್ತ ತನಿಖೆಯನ್ನು ಕೈಗೊಂಡು ಈ ದುಷ್ಕೃತ್ಯದ ಸಂಚಿನ ಹಿಂದೆ ಯಾರಿದ್ದಾರೆ ಎಂದು ಕಂಡು ಹಿಡಿಯಬೇಕೆಂದು ನರಸಿಂಹನಾಯಕ ಒತ್ತಾಯಿಸಿದರು.

ಮಾಜಿ ಸಚಿವ ಸತೀಶ ಜಾರಕಿಹೂಳಿ ಅವರಿಗೆ ಜೀವ ಭಯವಿದ್ದು ಕೂಡಲೇ ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡಬೇಕು ಮತ್ತು ಹತ್ಯೆಗೆ ಸಂಚು ರೂಪಿಸಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಮಾನವ ಬಂಧುತ್ವ ವೇದಿಕೆಯಿಂದ ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನರಸಿಂಹನಾಯಕ ಕರಡಿಗುಡ್ಡ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ವೇದಿಕೆ ಮುಖಂಡರು ಇದ್ದರು.