ಕಾಂಗ್ರೆಸ್‌ನವರು ವಿದ್ಯುತ್‌ ಬಿಲ್‌ ಕಟ್ಟಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವ್ಯಾರೂ ಬಿಲ್‌ ಕಟ್ಟುವುದಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು 

ಯಾದಗಿರಿ(ಮೇ.28): ವಿದ್ಯುತ್‌ ಬಿಲ್‌ ಕಟ್ಟಿಲ್ಲವೆಂದು ಕನೆಕ್ಷನ್‌ ಕಟ್‌ ಮಾಡಿದ್ದಕ್ಕೆ ಜೆಸ್ಕಾಂ ಸಿಬ್ಬಂದಿಯನ್ನು ಗ್ರಾಮಸ್ಥರು ಮತ್ತು ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿಯ ಅಬ್ಬೆತುಮಕೂರು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್‌ನವರು ವಿದ್ಯುತ್‌ ಬಿಲ್‌ ಕಟ್ಟಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವ್ಯಾರೂ ಬಿಲ್‌ ಕಟ್ಟುವುದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಬ್ಬೆತುಮಕೂರು ಗ್ರಾಮದಲ್ಲಿ ಆರೇಳು ಕುಟುಂಬಸ್ಥರು ಸುಮಾರು 5 ರಿಂದ 10 ಸಾವಿರದಷ್ಟುವಿದ್ಯುತ್‌ ಬಿಲ್‌ ಬಾಕಿ ಇಟ್ಟಿದ್ದಾರೆ.

ಸುರಪುರ ರಾಜವೆಂಕಟಪ್ಪ ನಾಯಕ ಗೆಲವು ಹಿನ್ನೆಲೆ; ಅಂಜನಾದ್ರಿಗೆ ಕಾರ್ಯಕರ್ತರು ಪಾದಯಾತ್ರೆ

ಬಾಕಿ ಇರುವ ಬಿಲ್‌ ಕಟ್ಟಲು ಹೇಳಿದ್ದಕ್ಕೆ ಗ್ರಾಮಸ್ಥರು ಕಟ್ಟಲು ಹಿಂದೇಟು ಹಾಕಿದ್ದರಿಂದ ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ವೈರ್‌ ಕತ್ತರಿಸಿ ತಮ್ಮ ವಾಹನದಲ್ಲಿ ಹಾಕಿದಾಗ ಮಹಿಳೆಯರು ಸ್ಥಳದಲ್ಲಿಯೇ ಗಲಾಟೆ ಮಾಡಿದ್ದಾರೆ. ಮಹಿಳೆಯರ ರಂಪಾಟಕ್ಕೆ ಜೆಸ್ಕಾಂ ಸಿಬ್ಬಂದಿ ಸುಸ್ತಾಗಿದ್ದಾರೆ.