Asianet Suvarna News Asianet Suvarna News

ಶಾಸಕ ಸ್ಥಾನದಿಂದಲೂ ವಜಾ ಆಗ್ತಾರಾ ರಮೇಶ್ : ಹೆಚ್ಚಿದೆ ಆಗ್ರಹ

ಸೀಡಿ ಪ್ರಕರಣ ಇದೀಗ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ರಮೇಶ್ ಜಾರಕಿಹೊಳಿಯವರನ್ನು ಶಾಸಕ ಸ್ಥಾನದಿಂದಲೂ ವಜಾಗೊಳಿಸಲು ಆಗ್ರಹಿಸಲಾಗಿದೆ. 

Congress Workers Demands For Expel Ramesh Jarkiholi From MLA Post snr
Author
Bengaluru, First Published Mar 29, 2021, 11:25 AM IST

 ನಂಜನಗೂಡು (ಮಾ.29):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ರಮೇಶ್‌ ಜಾರಕಿಹೊಳಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಹುಲ್ಲಹಳ್ಳಿ ವೃತ್ತದಲ್ಲಿ ಪ್ರತಿಭಟಿಸಿದರು.

ಈ ವೇಳೆ ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ದೇಬೂರು ಅಶೋಕ್‌ ಮಾತನಾಡಿ, ರಾಜ್ಯದ ಜನರಲ್ಲಿ ರಮೇಶ್‌ ಜಾರಕಿಹೊಳಿಯವರ ಸಿಡಿ ಪ್ರಕರಣ ದಿಗ್ಬ್ರಮೆ ಹುಟ್ಟಿಸಿದೆ. ಯುವತಿಯನ್ನು ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ, ನಂಬಿಸಿ ಅತ್ಯಾಚಾರ ಎಸಗಿದ್ದಾರೆ. ಜಾರಕಿಹೊಳಿ ಆರೋಪಿ ಸ್ಥಾನದಲ್ಲಿದ್ದು ಪ್ರಕರಣವನ್ನು ಮರೆಮಾಚಲು ಡಿ.ಕೆ. ಶಿವಕುಮಾರ್‌ ವಿರುದ್ಧ ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ: ಸಿಡಿ ಲೇಡಿ ಕುಟುಂಬಸ್ಥರ ಆರೋಪ, ಪ್ರತಿಕ್ರಿಯೆಗೆ ಡಿಕೆಶಿ ನಕಾರ .

ಪ್ರಕರಣ ಎಸ್‌ಐಟಿ ಮುಂದೆ ಇರುವಾಗ ವಿಚಾರಣೆ ನಡೆದು, ಪ್ರಕರಣದ ಸತ್ಯಾಸತ್ಯತೆ ಹೊರ ಬರುವ ಮುನ್ನವೇ ಸಂಬಂಧವೆ ಇಲ್ಲದ ಡಿ.ಕೆ. ಶಿವಕುಮಾರ್‌ ಮೇಲೆ ಸಲ್ಲದ ಆರೋಪ ಹೊರೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸರ್ಕಾರ ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜಾರಕಿಹೊಳಿ ಡಿ.ಕೆ. ಶಿವಕುಮಾರ್‌ ಅವರಲ್ಲಿ ಬೇಷರತ್‌ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಹುಲ್ಲಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಜಯಕುಮಾರ್‌, ಮುಖಂಡರಾದ ಕಳಲೆ ರಾಜೇಶ್‌, ಸಮಿವುಲ್ಲಾ, ತಗಡೂರು ಜಗದೀಶ್‌, ಶ್ರೀನಿವಾಸ್‌, ಮೂಡಳ್ಳಿ ಮಹದೇವಸ್ವಾಮಿ, ದೇವಿರಮ್ಮನಹಳ್ಳಿ ವಿಶ್ವ, ಯಾಲಳ್ಳಿ ನಾಗೇಂದ್ರ, ವಿಜಯಕುಮಾರ್‌, ಚಾಮಲಪುರ ಹುಂಡಿ ಮಂಜು, ಕುರಿಹುಂಡಿ ಸ್ವಾಮಿ ಇದ್ದರು.

Follow Us:
Download App:
  • android
  • ios