ನಂಜನಗೂಡು (ನ.08):  ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳಿಗೆ ಕಾಂಗ್ರೆಸ್‌ನ 11 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ.

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ನ ಕೆ.ಜಿ. ಮಹೇಶ್‌ ತಂಡ ಹಾಗೂ ಎಸ್‌.ಸಿ. ಮಹದೇವಪ್ಪ ಬಣದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅವರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು 11 , ಬಿಜೆಪಿ 1 ಸ್ಥಾನಗಳಲ್ಲಿ ಮಾತ್ರ ಗೆದ್ದರೆ ಎಸ್‌.ಸಿ.ಮಹದೇವಪ್ಪ ಬಣದ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಗಳು ಯಾವುದೇ ಸ್ಥಾನ ಪಡೆಯದೆ ಮುಖಭಂಗ ಅನುಭಸಿದರು.

'40 ಸಾವಿರ ಅಂತರದಲ್ಲಿ ಮುನಿರತ್ನ ವಿಜಯ : ಶಿರಾದಲ್ಲಿ ಬಿಜೆಪಿ ಭವಿಷ್ಯ ಹಿಂಗಿದೆ' ...

ಬಿ ತರಗತಿಯ ಬಿಡಿ ಕ್ಷೇತ್ರದ ಸ್ಥಾನಗಳ ಪೈಕಿ ಕಾಂಗ್ರೆಸ್‌ ಸಾಮಾನ್ಯ ಕ್ಷೇತ್ರದಿಂದ ಕೆ.ಜಿ.ಮಹೇಶ್‌ (588) ಮತ, ಎನ್‌.ಎಂ.ಮಂಜುನಾಥ್‌(459) ಮತ, ಎಸ್ಸಿ ಮೀಸಲು ಕ್ಷೇತ್ರದಿಂದ ವೀರೇದೇವನಪುರ ಜಯಕುಮಾರ್‌ (370) ಮತ, ಎಸ್ಟಿಕ್ಷೇತ್ರದಿಂದ ಟಿ.ಸರ್ವೇಶ್‌(368) ಮತ, ಮಹಿಳಾ ಕ್ಷೇತ್ರದಿಂದ ಮಂಜುಳಾ ಮಧು(444), ಸುನಂದಾ ಬಸವರಾಜು(370), ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಕೆ.ರಾಜು(360) ಮತ ಗಳಿಸುವ ಮೂಲಕ ಜಯದ ನಗೆ ಬೀರಿದರು. ಬಿಜೆಪಿ ಪಕ್ಷದಿಂದ ಜಯಗಳಿದ ಏಕೈಕ ಅಭ್ಯರ್ಥಿ ಂದುಳಿದ ವರ್ಗ ಬಿ. ುೕಸಲು ಕ್ಷೇತ್ರದಿಂದ ಎಸ್‌.ಎಂ. ಕೆಂಪಣ್ಣ(457) ಜಯಗಳಿಸಿದ್ದಾರೆ.ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್‌ ಕೆ.ಎಂ.ಮಹೇಶ್‌ ಕುಮಾರ್‌ ಘೋಸಿದರು.

ಎ ತರಗತಿಯ ಸದಸ್ಯ ಸಹಕಾರ ಸಂಘದ ಕ್ಷೇತ್ರದಿಂದ ಕಾಂಗ್ರೇಸ್‌ ಪಕ್ಷದ ಕಸುನಹಳ್ಳಿ ಕೆ.ಎಂ.ಶಿವಮೂರ್ತಿ (15) ಮತ, ಏಚಗಳ್ಳಿ ಸಂಘದಿಂದ ಶಿವಕುಮಾರ್‌(15) ಮತ, ಕೆಂಪಿಸಿದ್ದನಹುಮಡಿ ಸಂಘದಿಂದ ಶಿವಕುಮಾರ್‌(15), ಬಿಳಿಗೆರೆ ಸಹಕಾರ ಸಂಘದಿಂದ ಜಿ.ಡಿ.ಮಹೇಶ್‌(18) ಮತಗಳನ್ನು ಪಡೆದು ಜಯಗಳಿಸುವ ಮೂಲಕ 4 ಕ್ಷೇತ್ರಗಳಲ್ಲೂ ಕಾಂಗ್ರೇಸ್‌ ಅಭ್ಯರ್ಥಿಗಳೇ ಗೆಲುವು ಪಡೆದರೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡರು.

ಉಳಿದಂತೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಚಂದ್ರು(257), ಡಿ.ಎಂ.ನಂಜುಂಡಸ್ವಾು 293 ಮತ, ಮಹದೇವಮ್ಮ 231 ಮತ, ಬಿ.ಎನ್‌.ಮಂಜುನಾಥ್‌(321), ಎ ರಾಜೇಶ್‌ 223 ಮತ, ಶಾಂತಕುಮಾರಿ257 ಮತ ಗಳಿಸಿ ಪರಾಭವಗೊಂಡರು. ಕಾಂಗ್ರೇಸ್‌ ಪಕ್ಷದ ಮಹದೇವಪ್ಪ ಬಣದ ಎಲ್ಲಾ ಅಭ್ಯರ್ಥಿಗಳೂ ಸಹ ಸೋಲು ಅನುಭಸಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಜಯಗಳಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಬಾವುಟ ಹಿಡಿದು ಜಯಕಾರ ಹಾಕುವ ಮೂಲಕ ಸಂಭ್ರಮಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಂ. ಶಂಕರ್‌, ಶ್ರೀಕಂಠನಾಯ್ಕ, ಮುಖಂಡ ರಂಗದಾಸ್‌, ಕಂದಾಯ ಅಧಿಕಾರಿ ಪ್ರಕಾಶ್‌, ಸೇರಿದಂತೆ ಕಾಂಗ್ರೆಸ್‌ ಹಲವು ಕಾರ್ಯಕರ್ತರು ಇದ್ದರು.