ಸಕಲೇಶಪುರ (ಡಿ.08):  ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿ​ಸುವುದಾಗಿ ಜಿಲ್ಲಾಧ್ಯಕ್ಷ ಜಾವಗಲ್‌ ಮಂಜುನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ತಾಲೂಕಿನಲ್ಲಿ 12 ಗ್ರಾಮಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಗೆಲುವು ಸಾ​ಸಿದ್ದು ಈ ಬಾರಿ ಇನ್ನೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾ​ಸುವುದಾಗಿ ತಿಳಿಸಿದರು ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಜಿಲ್ಲೆಯ ಎಲ್ಲ ನಾಯಕರುಗಳ ಮಾರ್ಗದರ್ಶನ ಪಡೆದು ತಾಲೂಕಿನಲ್ಲಿ ಗೆಲುವು ಸಾ​ಸಲಿದೆ ಎಂದರು

ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...! ..

ಮಾಜಿ ಶಾಸಕ ಸಿಎಸ್‌ ಪುಟ್ಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯವು ಹೆಪುತ್ರ್ಪಕಟ್ಟಿದ್ದು ಸರ್ಕಾರಿ ಕಚೇರಿಗಳಲ್ಲಿ ಆಗಲಿ ಸಹಕಾರ ಸಂಘಗಳಲ್ಲಿ ಆಗಲಿ ಎಲ್ಲರೂ ಒಂದು ಕುಟುಂಬದ ದಾಯಾದಿಗಳಂತೆ ವರ್ತಿಸುತ್ತಿದರ. ಕಾಂಗ್ರೆಸ್‌ ಪಕ್ಷ ಸಂಘಟನೆ ಮಾಡಲು ಕೊಂಚ ತೊಡಕಾಗಿದೆ ಆದರೆ ಇದೀಗ ಜಿಲ್ಲೆಯ ಎಲ್ಲಾ ಮುಖಂಡರುಗಳು ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಯಕರ್ತರ ಸಭೆ ನಡೆಸಿ ಹೊಸ ಹುರುಪಿನಿಂದ ಮುಂದಿನ ಚುನಾವಣೆಯನ್ನು ಎದುರಿಸಲು ಸಿದ್ದಗೊಳಿಸುತ್ತಿದೆ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್‌.ಕೆ.ಜವರೇಗೌಡ ಮಾತನಾಡಿದರು. ತಾಲೂಕು ಅಧ್ಯಕ್ಷ ಭಾಸ್ಕರ್‌, ಡಿಸಿ ಸಣ್ಣಸ್ವಾಮಿ, ಲೋಕೇಶ್‌ ಮಸ್ತಾರೆ, ಟಿಎಪಿಎಸ್‌ ಎಂಎಸ್‌ ಅಧ್ಯಕ್ಷ ಲೋಹಿತ್‌ ಕೌಡಳ್ಳಿ ಕೆಪಿಸಿಸಿ ಸದಸ್ಯ ಪೀರ್‌ಸಾಬ್‌ ಇದ್ದರು.