ಕಾಂಗ್ರೆಸ್‌ ಪಕ್ಷವು ಸರಳ ಬಹುಮತದೊಂದಿಗೆ ಅ​ಧಿಕಾರವನ್ನು ಹಿಡಿಯಲಿದ್ದು, 17ಕ್ಕೂ ಅ​ಧಿಕ ಅಭ್ಯರ್ಥಿಗಳು ಗೆಲ್ಲಲಿದ್ದಾರೆ . ಅಧಿಕಾರ ನಮ್ಮದಾಗಲಿದೆ ಎಂದು ಕೈ ಮುಖಂಡರು ಹೇಳಿದರು. 

ಬೇಲೂರು (ಏ.22): ಮಾ.27ರಂದು ನಡೆಯಲಿರುವ ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ 14ನೇ ವಾರ್ಡಿನ ದಿವ್ಯಾ ಗಿರೀಶ್‌ ಹಾಗೂ 15ನೇ ವಾರ್ಡಿನ ಉಷಾ ಸತೀಶ್‌ ಪರವಾಗಿ ಪುರಸಭೆ ಮಾಜಿ ಸದಸ್ಯ ಬಿ ಎಲ್‌ ಧರ್ಮೇಗೌಡ ಮತಯಾಚನೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಸರಳ ಬಹುಮತದೊಂದಿಗೆ ಅ​ಧಿಕಾರವನ್ನು ಹಿಡಿಯಲಿದ್ದು, 17ಕ್ಕೂ ಅ​ಧಿಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ.

ದಳಕ್ಕೆ ಅಧಿಕಾರದ ಚುಕ್ಕಾಣಿ : ಪ್ರಜ್ವಲ್ ರೇವಣ್ಣ ಭರವಸೆ

ಪಟ್ಟಣದ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ನೀರು, ಚರಂಡಿ ಮುಂತಾದ ಸಮಸ್ಯೆಗಳನ್ನು ಈಡೇರಿಸುವುದೇ ಕಾಂಗ್ರೆಸ್‌ ಪಕ್ಷದ ಧ್ಯೇಯ ಉದ್ದೇಶ ಎಂದರು.

ಪುರಸಭೆ ಮಾಜಿ ಸದಸ್ಯ ಸತೀಶ್‌, ಮಾಜಿ ನಾಮಿನಿ ಸದಸ್ಯ ದೇವರಾಜ್‌,ಗಿರೀಶ್‌, ಸುಲೋಚನ,ವೆಂಕಟೇಶ್‌, ಕೃಷ್ಣಮೂರ್ತಿ, ಬಾಬು ಇದ್ದರು.