Karnataka Assembly Election 2023 : ಕಾಂಗ್ರೆಸ್‌ಗೆ ರಾಜ್ಯದ ಚುಕ್ಕಾಣಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನ ಸಾಮಾನ್ಯರು ಮಾತ್ರವಲ್ಲದೇ ರೈತಾಪಿ ಕೂಲಿ ಕಾರ್ಮಿಕರು ಸಾಕಷ್ಟುಸಂಕಷ್ಟಕ್ಕೀಡಾಗಿದ್ದು 2023ಕ್ಕೆ ಕಾಂಗ್ರೆಸ್‌ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಜನ ನಿರ್ಧಾರ ಮಾಡಿದ್ದಾರೆಂದು ಕೆಪಿಸಿಸಿ ಸದಸ್ಯ ವಿನಯ್‌ ಶಾಮ್‌ ಹೇಳಿದರು.

Congress Will  Take Power in 2023 snr

  ಚಿಕ್ಕಬಳ್ಳಾಪುರ (ನ.07):  ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನ ಸಾಮಾನ್ಯರು ಮಾತ್ರವಲ್ಲದೇ ರೈತಾಪಿ ಕೂಲಿ ಕಾರ್ಮಿಕರು ಸಾಕಷ್ಟುಸಂಕಷ್ಟಕ್ಕೀಡಾಗಿದ್ದು 2023ಕ್ಕೆ ಕಾಂಗ್ರೆಸ್‌ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಜನ ನಿರ್ಧಾರ ಮಾಡಿದ್ದಾರೆಂದು ಕೆಪಿಸಿಸಿ ಸದಸ್ಯ ವಿನಯ್‌ ಶಾಮ್‌ ಹೇಳಿದರು.

ನಗರದ ಹೊರ ವಲಯದ ಚದಲುಪುರ ಕ್ರಾಸ್‌ನಲ್ಲಿ ಭಾನುವಾರ ಬೆಂಗಳೂರಿನಲ್ಲಿ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂಧಿಸಲು ಹಮ್ಮಿಕೊಂಡಿದ್ದ ಸವæäೕರ್‍ದಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಕ್ಷೇತ್ರದಿಂದ ನೂರಾರು ಬಸ್‌ಗಳಲ್ಲಿ ತೆರಳಿದ ನೂರಾರು ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೆಲೆ ಏರಿಕೆಯಿಂದ ಈಗಾಗಲೇ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್‌ (petrol)  ಡೀಸೆಲ್‌ (Diesel)  ಬೆಲೆ ಹೆಚ್ಚಳದಿಂದ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಈ ರೀತಿ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಾರೆ. ರಾಜ್ಯದ ಜನತೆ ಮುಂದಿನ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ತಂದು ಕೊಡುವ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ಎಂ.ಶಿವಾನಂದ್‌ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕಾಂಗ್ರೆಸ್‌ಗೆ ಇಡೀ ದಕ್ಷಿಣ ಭಾರತದಲ್ಲಿ ಆನೆ ಬಲ ಬಂದಂತೆ ಆಗಿದೆ. ಅವರ ನಾಯಕತ್ವದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ, ಬಿಜೆಪಿ ಸುಳ್ಳಿನ ಪಕ್ಷ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಯಕರಾದ ಯಲುವಹಳ್ಳಿ ರಮೇಶ್‌, ಕೆ.ಎನ್‌.ರಘು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಮ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌, ಅಜಿತ್‌ ಪ್ರಸಾದ್‌, ಮಂಚನಬಲೆ ಇಸ್ಮಾಯಿಲ್‌, ಮತ್ತಿತರರು ಉಪಸ್ಥಿತರಿದ್ದರು.

ಭಿನ್ನಮತ ಬದಿಗಿಟ್ಟು ಗೆಲುವಿಗೆ ಶ್ರಮಿಸಿ

ಬೆಂಗಳೂರು (ನ.07): ಮುಂದಿನ ಸಾರ್ವತ್ರಿಕ ಚುನಾವಣೆಯು ಕಾಂಗ್ರೆಸ್‌ ಗೆಲುವಿಗೆ ಪೂರಕವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಭಿನ್ನಮತಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸಲಹೆ ನೀಡಿದ್ದಾರೆ. ಯಲಹಂಕದ ಖಾಸಗಿ ಹೋಟೆಲ್‌ನಲ್ಲಿ ಮುಂದುವರೆದ ಜಿಲ್ಲಾ ನಾಯಕರೊಂದಿಗಿನ ಸರಣಿ ಸಭೆಯ ಭಾಗವಾಗಿ ಶನಿವಾರ ಬೆಳಗಾವಿ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ವಿಧಾನಸಭಾ ಚುನಾವಣಾ ಟಿಕೆಟ್‌ ಆಕಾಂಕ್ಷಿಗಳು, ಪ್ರಮುಖ ನಾಯಕರ ಸಭೆ ನಡೆಸಿ ಅವರು ಮಾತನಾಡಿದರು.

ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ, ಜನ ಬೆಂಬಲವಿರುವವರಿಗೆ ಟಿಕೆಟ್‌ ನೀಡಲಾಗುವುದು. ಯಾರಿಗೇ ಟಿಕೆಟ್‌ ನೀಡಿದರೂ ಇನ್ನುಳಿದ ಆಕಾಂಕ್ಷಿಗಳು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಅಭ್ಯರ್ಥಿ ಆಯ್ಕೆ ಕುರಿತು ಕೆಪಿಸಿಸಿ ಹಾಗೂ ಎಐಸಿಸಿ ತನ್ನ ತಳಮಟ್ಟದ ಸಮೀಕ್ಷಾ ಕೆಲಸ ಮಾಡಲಿದೆ. ಆದರೆ, ಸ್ಥಳೀಯವಾಗಿ ಪ್ರಭಾವ ಬೀರುವ ಹಲವು ಅಂಶಗಳು ನಿಮಗೆ ತಿಳಿದಿರುತ್ತವೆ. ಹೀಗಾಗಿ ಯಾವ್ಯಾವ ಜಿಲ್ಲೆಯಲ್ಲಿ ಯಾವ್ಯಾವ ಜಾತಿಯ ಮತದಾರರು ಎಷ್ಟಿದ್ದಾರೆ, ಯಾವ ಜಾತಿಯವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ ಎಂಬ ನೀಲನಕ್ಷೆಯನ್ನೂ ನೀವೇ ನೀಡಿ. 

Belagavi: ಜೆಡಿಎಸ್‌ಗೆ 123 ಸ್ಥಾನ ಗೆಲ್ಲುವ ಗುರಿ: ಸಿ.ಎಂ.ಇಬ್ರಾಹಿಂ

ಟಿಕೆಟ್‌ ನೀಡುವ ಸಮಯದಲ್ಲಿ ಇದನ್ನೂ ಪರಿಗಣಿಸಲಾಗುವುದು ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಇನ್ನು ಚುನಾವಣೆ ದೃಷ್ಟಿಯಿಂದ ಕೆಪಿಸಿಸಿಯಿಂದ ಆಯೋಜಿಸಲಿರುವ ಬಸ್‌ ಯಾತ್ರೆಯು ನಿಮ್ಮ ಜಿಲ್ಲೆಗಳಿಗೆ ಆಗಮಿಸಿದಾಗ ಹೆಚ್ಚು ಜನರನ್ನು ಸೇರಿಸಿ ಯಶಸ್ವಿಗೊಳಿಸಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು, ಸಭೆ ನಡೆಸಬೇಕು. ಕೃಷ್ಣಾ, ಮಹದಾಯಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ, ಕಳಪೆ ಕಾಮಗಾರಿ ವಿರೋಧಿಸಿ ನಡೆಸಲಿರುವ ಟ್ರ್ಯಾಕ್ಟರ್‌ ರಾರ‍ಯಲಿ ಯಶಸ್ಸಿಗೆ ಆಯಾ ಜಿಲ್ಲೆಯ ಮುಖಂಡರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios