ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ - ಅಶ್ವತ್ಥ್ ನಾರಾಯಣ್ ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ. ನಮ್ಮ ಶಾಸಕರು ಯಾರು ಕಾಂಗ್ರೆಸ್‌ಗೆ ಹೋಗಲ್ಲ 

 ಮೈಸೂರು (ಅ.05): ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರಲ್ಲ. ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ. ನಮ್ಮ ಶಾಸಕರು ಯಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಐಟಿ- ಬಿಟಿ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ (Dr CN Ashwath Narayan) ತಿಳಿಸಿದರು.

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್‌ ರಾಷ್ಟ್ರ ಮಟ್ಟದಲ್ಲೇ ಒಡೆದು ನೂರು ಭಾಗವಾಗಿದೆ. ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ ಕಿತ್ತಾಟ ಶುರುವಾಗಿದೆ. ನಾನು ಬರೆದುಕೊಡ್ತೀನಿ ಯಾವ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ನಮ್ಮ ಶಾಸಕರಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದರು.

ಕಾಂಗ್ರೆಸ್‌ಗೆ ಜೆಡಿಎಸ್ ಮುಖಂಡ ರೇವಣ್ಣ ಸವಾಲ್

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಲೆ ಬಗ್ಗೆ ಯಡಿಯೂರಪ್ಪ (BS Yediyurappa) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನಕ್ಕೆ ಹೋಗಿ ಕೇಳಿದ್ರು ಶೇ.65 ಜನ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದ್ರು ಮೋದಿ ಹೇಸರೇಳ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ. ನರೇಂದ್ರ ಮೋದಿ ಅಲೆ ಸದಾ ಇದ್ದೆ ಇರುತ್ತೆ ಎಂದು ಅವರು ದಳಪತಿಗಳು ಹಾಗೂ ಡಿಕೆ ಶಿವಕುಮಾರ್‌ಗೆ (DK Shivakumar) ಟಾಂಗ್‌ ನೀಡಿದರು.

ಉಪ ಚುನಾವಣೆ (Karnataka By Election) ಉಸ್ತುವಾರಿಗಳ ಪಟ್ಟಿಯಲ್ಲಿ ಯಾರನ್ನ ಕೈ ಬಿಟ್ಟಿದು ಎಂಬುದು ಮುಖ್ಯವಲ್ಲ. ಬಿಜೆಪಿಯಲ್ಲಿ (BJP) ಎಲ್ಲರೂ ಪ್ರಚಾರದಲ್ಲಿ ಭಾಗವಹಿಸಬಹುದು. ಬಿ.ವೈ. ವಿಜಯೇಂದ್ರ (BY Vijayendra) ಅವರನ್ನ ಪ್ರಚಾರಕ್ಕೆ ಬಳಸಿಕೊಳ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

40 ಅಲ್ಲ ನಾಲ್ವರನ್ನು ಕರೆದೊಯ್ಯಲಿ

ಬಿಜೆಪಿ (BJP) ಶಾಸಕರು ಸಿಂಹಗಳಿದ್ದಂತೆ. ಅವರು ಮಾರಾಟದ ವಸ್ತುಗಳಲ್ಲ. ಅವರಾರ‍ಯರೂ ಕಾಂಗ್ರೆಸ್‌ಗೆ (Congress) ಹೋಗುವ ಮಾತೇ ಇಲ್ಲ. 40 ಅಲ್ಲ, ನಾಲ್ಕು ಜನ ಶಾಸಕರನ್ನು ಕಾಂಗ್ರೆಸ್‌ ಪಕ್ಷ ಸೆಳೆದು ತೋರಿಸಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ. 

ನಲವತ್ತು ಶಾಸಕರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK shivakumar) ಹೇಳುತ್ತಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡವರಷ್ಟೇ ಈ ಮಾತು ಹೇಳಬೇಕಷ್ಟೆ.

ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಚಿನ್ನದ ಗಟ್ಟಿ: ಖರ್ಗೆ ಅವರೇ ಈ ಕೂಡಲೇ ಕ್ಷಮೆಯಾಚಿಸಿ, ಈಶ್ವರಪ್ಪ

 ಸಾಯುವ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ.

 ಕಾಂಗ್ರೆಸ್‌ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿಕೊಡಲಿ, ನಂತರ ನಾವು ಕೊಡುತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಮರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಕಾಂಗ್ರೆಸ್‌ಗೆ ಭಯವಾಗುತ್ತದೆ ಎಂದರು.