5 ತಿಂಗಳಿಂದ 10 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯು ಕೇವಲ ಪುಸ್ತಕದ ಅಂಕಿಅಂಶಕ್ಕೆ ಸೀಮಿತ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯೇ ಇಲ್ಲದೇ 200ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬಂದಿದ್ದಾರೆ ಎಂದು ಕೊರಟಗೆರೆ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ : 5 ತಿಂಗಳಿಂದ 10 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯು ಕೇವಲ ಪುಸ್ತಕದ ಅಂಕಿಅಂಶಕ್ಕೆ ಸೀಮಿತ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯೇ ಇಲ್ಲದೇ 200ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬಂದಿದ್ದಾರೆ ಎಂದು ಕೊರಟಗೆರೆ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ 200ಕ್ಕೂ ಅಧಿಕ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದಲ್ಲಿಯೇ ಅತಿದೊಡ್ಡ ಪಕ್ಷ ಬಿಜೆಪಿ. ಕೋಟ್ಯಂತರ ಕಾರ್ಯಕರ್ತರ ಶಕ್ತಿಯಿರುವ ಏಕೈಕ ಪಕ್ಷವೇ ನಮ್ಮ ಬಿಜೆಪಿ. ಭಾರತ ಮತ್ತು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಈಗಾಗಲೇ ಮುಳುಗುತ್ತಿರುವ ಹಡುಗು. ಕಾಂಗ್ರೆಸ್ ಪಕ್ಷದ ಭರವಸೆ ಕೇವಲ ಆಶ್ವಾಸನೆಗೆ ಅಷ್ಟೆಸೀಮಿತ. ಕೊರಟಗೆರೆ ಕ್ಷೇತ್ರದಲ್ಲಿ ನಾನು ಚುನಾವಣೆ ನಡೆಸಲು ಮಾತ್ರ ಬಂದಿಲ್ಲ. ಚುನಾವಣೆ ಮುಗಿದ ಬಳಿಕವು ನಾನು ಜನರ ಜೊತೆಯಾಗಿ ಇರುತ್ತೇನೆ ಎಂದು ತಿಳಿಸಿದರು.
ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್ ಮಾತನಾಡಿ ವಿಶ್ವನಾಯಕ ಮೋದಿ ಆಡಳಿತದ ಬಿಜೆಪಿ ಶಕ್ತಿಯುತ ಆಗಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದು 200ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಆಗಮಿಸಿದ್ದಾರೆ. ಬಿಜೆಪಿಯಲ್ಲಿ ಮುಖಂಡರಿಗೆ ಸೂಕ್ತವಾದ ಸ್ಥಾನಮಾನ ನೀಡಿ ಗೌರವ ನೀಡುತ್ತೇವೆ ಎಂದು ಹೇಳಿದರು.
ತುಂಬಾಡಿ ಬಿಜೆಪಿ ಮುಖಂಡೆ ರೇಣುಕಾಶ್ರೀ ಮಾತನಾಡಿ ನಮ್ಮ ಸರ್ಕಾಶಶರ ಇಲ್ಲ ಅನುದಾನ ಬಿಜೆಪಿ ಸರ್ಕಾರ ನೀಡೋದಿಲ್ಲ ಅಂತಾರೇ ನಮ್ಮ ಶಾಸಕರು. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬರೋದೇ ಗ್ಯಾರಂಟಿ ಇಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಇಷ್ಟುದಿನ ಬಿಜೆಪಿ ಅಭ್ಯರ್ಥಿ ಇರ್ಲಿಲ್ಲ. ಈಗ ನಿವೃತ್ತ ಐಎಎಸ್ ಅಧಿಕಾರ ಬಂದಿರೋದು ನಮಗೆಲ್ಲ ಮತ್ತಷ್ಟುಶಕ್ತಿ ಬಂದಿದೆ. ಅನಿಲ್‌ಕುಮಾರ್ ಗೆದ್ದರೇ ಕೊರಟಗೆರೆ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತೆಂಗುನಾರು ಮಾಜಿ ಅಧ್ಯಕ್ಷ ಜಿ. ವೆಂಕಟಾಚಲಯ್ಯ, ರೈತಮೋರ್ಚಾ ಜಿಲ್ಲಾಧ್ಯಕ್ಷ ವಿಶ್ವನಾಥ ಅಪ್ಪಾಜಪ್ಪ, ಜಿಪಂ ಮಾಜಿ ಸದಸ್ಯೆ ಸಿ.ಬಿ.ರಂಗಮ್ಮ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುದತ್, ಯುವಧ್ಯಕ್ಷ ಅರುಣ್, ಪಪಂ ಸದಸ್ಯ ಪ್ರದೀಪಕುಮಾರ್, ಮುಖಂಡರಾದ ಶಿವರುದ್ರಯ್ಯ, ಮಧುಸೂದನ್, ಸಂಜೀವರೆಡ್ಡಿ, ಗೋಪಾಲಕೃಷ್ಣ, ದಾಸಾಲುಕುಂಟೆ ರಘು, ದಾಡಿವೆಂಕಟೇಶ್ ಮತ್ತಿತರರು ಇದ್ದರು.
ಬಾಕ್ಸ್ ..
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೇರ್ಪಡೆ..
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುಂಡಿನಪಾಳ್ಯ ನಟೇಶ್, ಓಬಿಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಜೆಟ್ಟಿಅಗ್ರಹಾರ ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್, ವಡ್ಡಗೆರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜಪ್ಪ, ಮಾಜಿ ಪಪಂ ಅಧ್ಯಕ್ಷ ಪರಮೇಶ್, ಮುಖಂಡರಾದ ವಿನೋದ್, ನಿತೀನ್, ಸುರೇಂದ್ರಬಾಬು, ರವಿಕುಮಾರ್, ನಾಗರಾಜು, ರಮೇಶ್ ಸೇರಿದಂತೆ ಅಗ್ರಹಾರ, ಹುಲೀಕುಂಟೆ ಮತ್ತು ವಡ್ಡಗೆರೆ ಗ್ರಾಪಂಯ 200ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ಅನಿಲ್‌ಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾದರು.
(ಚಿತ್ರ ಇದೆ)
04 ಕೊರಟಗೆರೆ ಚಿತ್ರ1:- ಕೊರಟಗೆರೆ ಪಟ್ಟಣದ ಪಾಂಚಜನ್ಯ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ 200ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು.
04 ಕೊರಟಗೆರೆ ಚಿತ್ರ2:- ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಗೇರಹಳ್ಳಿಯ ಮುಸ್ಲಿಂ ಮುಖಂಡರು.
