ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ : ಡಾ. ರವೀಂದ್ರ ವಿಶ್ವಾಸ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಮತ ಕ್ಷೇತ್ರದ ಉಸ್ತುವಾರಿ ಡಾ. ರವೀಂದ್ರ ಹೇಳಿದರು.

Congress will come to power in the state  Dr  Ravindra   snr

  ಸಾಲಿಗ್ರಾಮ :  ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಮತ ಕ್ಷೇತ್ರದ ಉಸ್ತುವಾರಿ ಡಾ. ರವೀಂದ್ರ ಹೇಳಿದರು.

ಸಾಲಿಗ್ರಾಮ ಪಟ್ಟಣದ ಶ್ರೀ ಯೋಗನರಸಿಂಹ ಸ್ವಾಮಿ ದೇಗುಲದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಜನಶೀರ್ವಾದ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್‌ ಗೆಲುವು ಖಚಿತವಾಗಿದೆ. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ನಾವೆಲ್ಲರೂ ಮತ್ತಷ್ಟುಸಂಘಟಿತರಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷದ ಅಭ್ಯರ್ಥಿ ಡಿ. ರವಿಶಂಕರ್‌ ಗೆಲುವಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಡಿ. ರವಿಶಂಕರ್‌ ಮಾತನಾಡಿ, ಕಾಂಗ್ರೆಸ್‌ ಅಧಿಕಾರದಲ್ಲಿ ಆಗಿರುವ ಯೋಜನೆಗಳ ಬಗ್ಗೆ ಹಾಗೂ ಮುಂದಿನ ಸರ್ಕಾರದಲ್ಲಿ ಅನುಷ್ಠಾನಕ್ಕೆ ತರುವ ಗ್ಯಾರಂಟಿ ಕಾರ್ಡ್‌ ಯೋಜನೆಯ ಬಗ್ಗೆ ಜನರಿಗೆ ತಿಳಿಸುತ್ತಿದ್ದೇವೆ ಎಂದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಎಸ್‌.ಪಿ. ತಮ್ಮಯ್ಯ, ಗ್ರಾಪಂ ಸದಸ್ಯ ಹೇಮಂತ್‌, ಸಂದೇಶ್‌, ರಾಜ್ಯ ಎಸ್ಟಿಘಟಕದ ಉಪಾಧ್ಯಕ್ಷ ಶ್ರೀನಿವಾಸ್‌, ತಾಲೂಕು ಎಸ್ಟಿಘಟಕದ ಅಧ್ಯಕ್ಷ ಮಹದೇವ್‌ ಇದ್ದರು.

ಕೈ ಟಿಕೆಟ್‌ಗಾಗೀ ದೇವರ ಮೊರೆ ಹೋದ ಮುಖಂಡ

ಬಾಗಲಕೋಟೆ(ಏ.05): ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾದಾಮಿ ವಿಧಾನಸಭಾ ಮತಕ್ಷೇತ್ರದಿಂದ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ ಮಾಡದೇ ವರುಣಾ ಕಡೆಗೆ ಮುಖ ಮಾಡಿರೋ ಬೆನ್ನಲ್ಲೇ ಬಾದಾಮಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಗರಿಗೆದರಿದ್ದು, ಇವುಗಳ ಮಧ್ಯೆ ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರ ಅಭಿಮಾನಿಗಳು ನಿನ್ನೆ(ಮಂಗಳವಾರ) ದೇವಿಗೆ ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ ಪ್ರಸಂಗ ನಡೆದಿದೆ. 

ಹೌದು, ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ ಸುಕ್ಷೇತ್ರ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿಯಲ್ಲಿ ಮೊರೆಯಿಟ್ಟು ಯುವಕರು ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇಗುಲದಲ್ಲಿ ನಡೆಯಿತು. ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಬಂದಿದ್ದ  ಯುವಕರು ಪುಷ್ಕರಣಿಯಿಂದ ನೀರನ್ನ ತಲೆ ಮೇಲೆ ಸುರಿದುಕೊಂಡು ನಂತರ ದೀರ್ಘದಂಡ ನಮಸ್ಕಾರ ಹಾಕುತ್ತಾ ಬನಶಂಕರಿ ದೇವಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ರು. ಸಿದ್ದರಾಮಯ್ಯನವರು ಬಾದಾಮಿಗೆ ಈ ಬಾರಿ ಬರದೇ ಇರುವ ಹಿನ್ನೆಲೆಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ ಬೆಂಬಲಿಗರು ಹೊಸಗೌಡರ ಪರ ಘೋಷಣೆಗಳನ್ನ ಹಾಕಿದ್ರು. ಇನ್ನು ದೀರ್ಘ ದಂಡ ನಮಸ್ಕಾರ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಸಹ ಪಾಲ್ಗೊಂಡಿದ್ರು.

KARNATAKA ASSEMBLY ELECTIONS 2023: ತೇರದಾಳ ಕಾಂಗ್ರೆಸ್‌ ಬಚಾವೋ..ಉಮಾಶ್ರೀ ಹಟಾವೋ..!

ಘೋಷಣೆ ಕೂಗಿದ ಹೊಸಗೌಡರ ಅಭಿಮಾನಿಗಳು...

ಇನ್ನು ಇತ್ತ ಟಿಕೆಟ್ ಆಕಾಂಕ್ಷಿಯಾಗಿರುವ ಮಹೇಶ ಹೊಸಗೌಡರ ಪರ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರೆ ಅತ್ತ ಅವರ ಅಭಿಮಾನಿಗಳು ಭಿತ್ತಪತ್ರ ಹಿಡಿದು ಬಾದಾಮಿಯಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು.‌

ಪಕ್ಷಕ್ಕಾಗಿ ದುಡಿದಿದ್ದೇನೆ ಈಗ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆಂದ ಮಹೇಶ ಹೊಸಗೌಡರ 

ಇನ್ನು ಇದೇ ವೇಳೆ ಪ್ರತಿಕ್ರಿಯೆ ನೀಡಿದ  ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರ, ಹಿಂದಿನಿಂದಲೂ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದ ಜೊತೆ ನಿಲ್ಲುತ್ತಾ ಬಂದಿದ್ದು, ಕಳೆದ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯನವರು ಬಂದ ಮೇಲೆ ಅವರೊಂದಿಗೆ ಸೇರಿ ಸಾಕಷ್ಟು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇವೆ, ಸಿದ್ದರಾಮಯ್ಯನವರಂತಹ ನಾಯಕರ ಜೊತೆ ಸೇರಿ ಕೆಲಸ ಮಾಡಿದ್ದೇವೆ, ಈ ಬಾರಿ ಸಿದ್ದರಾಮಯ್ಯನವರು ವರುಣಾದಿಂದ ಸ್ಫರ್ದೆ ಮಾಡಲು ನಿರ್ಧರಿಸಿದ್ದು, ಹೀಗಾಗಿ ಈ ಬಾರಿ ಬಾದಾಮಿ ಟಿಕೆಟ್ ತಮಗೆ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios