Asianet Suvarna News Asianet Suvarna News

ಹಾಲಿ, ಮಾಜಿ ಶಾಸಕರ ಭಾರಿ ಪೈಪೋಟಿ : ಬಿಜೆಪಿಯಿಂದ ಅಧಿಕಾರ ಪಡೆಯಲು ಕಾಂಗ್ರೆಸ್ ಯತ್ನ

ರಾಜ್ಯದಲ್ಲಿ  ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ.  ಇದೇ ವೇಳೆ ಅಧಿಕಾರಕ್ಕಾಗಿ ಪಕ್ಷಗಳ ಪೈಪೋಟಿಯೂ ಜೋರಾಗಿದೆ. 

Congress Try To get Power in Bangarapete TAPCMS Election snr
Author
Bengaluru, First Published Oct 12, 2020, 11:53 AM IST
  • Facebook
  • Twitter
  • Whatsapp

ಬಂಗಾರಪೇಟೆ (ಅ.12): ಇಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಇದೇ ತಿಂಗಳ 18ರಂದು ನಡೆಯಲಿದ್ದು, ಆಡಳಿತ ಮಂಡಳಿಯ ಕೈ ಹಿಡಿಯಲು ಹಾಲಿ ಮತ್ತು ಮಾಜಿ ಶಾಸಕರ ಬಣಗಳು ಜಿದ್ದಾಜಿದ್ದಿಗೆ ಬಿದ್ದಿರುವುದರಿಂದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ಬಾರಿ ಆಡಳಿತ ಮಂಡಳಿ ಬಿಜೆಪಿ ವಶದಲ್ಲಿತ್ತು. ಈ ಬಾರಿ ಬಿಜೆಪಿಯಿಂದ ಕಾಂಗ್ರೆಸ್‌ ವಶಪಡಿಸಿಕೊಳ್ಳಲು ಹಾಲಿ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಸಹ ಮತ್ತೆ ತಮ್ಮ ಬೆಂಬಲಿಗರನ್ನೇ ಟಿಎಪಿಸಿಎಂಎಸ್‌ನಲ್ಲಿ ಕೂರಿಸಲು ಪ್ರತಿ ತಂತ್ರ ರೂಪಿಸುತ್ತಿರುವುದು ಚುನಾವಣೆ ಎಲ್ಲರ ಗಮನ ಸೆಳೆಯುವಂತಾಗಿದೆ. ಕಳೆದ ಬಾರಿ 10 ನಿರ್ದೇಶಕರನ್ನು ಹೊಂದಿದ್ದ ಆಡಳಿತ ಮಂಡಳಿ ಈ ಬಾರಿ 4 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ 14 ನಿರ್ದೇಶಕರನ್ನು ಮತದಾರರು ಆಯ್ಕೆ ಮಾಡಬೇಕಿದೆ.

ಕುತೂಹಲದ ಕೇಂದ್ರವಾದ ಆರ್‌ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ ...

14 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನ ಭಾನುವಾರವಾಗಿದ್ದು, ಒಟ್ಟು 36 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಹಾಲಿ ನಿರ್ದೇಶಕರಲ್ಲಿ ಎಲ್ಲ ನಿರ್ದೇಶಕರು ಮತ್ತೆ ಸ್ಪರ್ಧೆ ಬಯಸಿದ್ದು, ಬಹುತೇಕ ನಿರ್ದೇಶಕರು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಬಣದಿಂದ ಕಣಕ್ಕಿಳಿಯಲು ಮುಂದಾಗಿರುವುದರಿಂದ ಹಾಲಿ ಶಾಸಕರು ಹೊಸ ಮುಖಗಳನ್ನು ಕಣಕ್ಕಿಳಿಸಿದ್ದಾರೆ. ಕಳೆದ ಅವಧಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿದ್ದ ಎಂ. ಮಾರ್ಕಂಡೇಗೌಡ ಸಂಸ್ಥೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರಿಂದ ಚುನಾವಣೆಗೆ ಸ್ವರ್ದಿಸಲು ಎಲ್ಲರನ್ನು ಸೆಳೆಯುವಂತೆ ಮಾಡಿದೆ.

2 ಸಾವಿರ ಮತದಾರರ ರದ್ಧತಿ:

ಸಂಸ್ಥೆಯಲ್ಲಿ ಸುಮಾರು 3 ಸಾವಿರ ಮಂದಿ ಷೇರುದಾರರಿದ್ದು, ಈ ಪೈಕಿ 2 ಸಾವಿರದಷ್ಟುಮಂದಿ ವಾರ್ಷಿಕ ಸಭೆಗಳಿಗೆ ಗೈರು ಹಾಜರಾಗಿದ್ದು ಮತ್ತು ಸಂಸ್ಥೆಯಲ್ಲಿನ ಗೊಬ್ಬರ ಇತ್ಯಾದಿಗಳನ್ನು ಖರೀದಿಸದೆ ನಿರ್ಲಿಪ್ತರಾಗಿದ್ದರಿಂದ ಬೈ ಲಾ ಪ್ರಕಾರ ಇಂತಹ ಷೇರುದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹರಾಗಿರುತ್ತಾರೆ. ಇಂತಹ 2 ಸಾವಿರ ಷೇರುದಾರರನ್ನು ಸಂಸ್ಥೆ ಗುರುತಿಸಿರುವುದೇ ಹಾಲಿ ಮತ್ತು ಮಾಜಿ ಶಾಸಕರ ನಡುವೆ ರಾಜಕೀಯ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಬೆಂಬಲಿಗರಾದ ಸಂಸ್ಥೆಯ ಮಾಜಿ ಅಧ್ಯಕ್ಷ ಮಾರ್ಕಂಡೇಗೌಡ, ಸೀತಾರಾಮಪ್ಪ, ಮಾಜಿ ಶಾಸಕರ ಪುತ್ರ ಎನ್‌.ಶಶಿಕಾಂತ್‌, ರಾಮಯ್ಯ, ಅಶ್ವಥ್‌, ಕೃಷ್ಣೇಗೌಡ, ಬಿ.ಎಂ.ವೆಂಕಟೇಶ್‌, ಎಂ.ಎಸ್‌.ಆನಂದ್‌, ಜುಂಜನಹಳ್ಳಿ ನಾರಾಯಣಸ್ವಾಮಿ, ಬಾಲಚಂದ್ರ ಮತ್ತು ಶಾಸಕರ ಬೆಂಬಲಿಗರಾದ ಎಂ.ಚಂದ್ರಪ್ಪ, ರಾಜಾರೆಡ್ಡಿ, ಜಿ.ವೆಂಕಟೇಶಗೌಡ, ರಾಮೇಗೌಡ ನಾಮಪತ್ರ ಸಲ್ಲಿಸಿದರವರ ಪ್ರಮುಖರಾಗಿದ್ದಾರೆ.

Follow Us:
Download App:
  • android
  • ios