Asianet Suvarna News Asianet Suvarna News

ಜಯಮಾಲಾಗೆ ಕಾಂಗ್ರೆಸಿಗರಿಂದಲೇ ಅವಮಾನ

ಕಾರ್ಯಕರ್ತರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಜಯಮಾಲಾ ಸಮಜಾಯಿಷಿ ನೀಡಲು ಮುಂದಾದರೂ ಅವರ ಆಕ್ರೋಶ ಮಾತ್ರ ತಣ್ಣಗಾಗಲಿಲ್ಲ. ಇದಕ್ಕೆ ಕೋಪಗೊಂಡ ಸಚಿವೆ ಮಾಧ್ಯಮದವರನ್ನು ಮುಂದಿಟ್ಟುಕೊಂಡು ಹದರಿಸಲು ಬರಬೇಡಿ ಎಂದರು

Congress tries to gherao Minister Jayamala at Udupi
Author
Bengaluru, First Published Oct 2, 2018, 4:00 PM IST
  • Facebook
  • Twitter
  • Whatsapp

ಉಡುಪಿ(ಅ.02): ಸಚಿವೆ ಜಯಮಾಲಾಗೆ ಸ್ವಪಕ್ಷೀಯರೇ ಕಾಂಗ್ರೆಸ್ ಕಚೇರಿಯಲ್ಲೇ ಮುತ್ತಿಗೆ ಹಾಕಿದ ಘಟನೆ ಉಡುಪಿಯಲ್ಲಿ ನಡೆಯಿತು.

ಇಂದು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಜಿಲ್ಲಾ ಉಸ್ತುವಾರಿ ಸಚಿವೆಗೆ ಇರಿಸುಮುರಿಸು ಉಂಟು ಮಾಡಿದರು. ಭಾರತ್ ಬಂದ್ ವೇಳೆ ನಡೆದ ಗಲಭೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಆದಾಗ ನಮ್ಮ ಕಷ್ಟ ಕೇಳಲಿಲ್ಲ. ಗಾಯಗೊಂಡು ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಲಿಲ್ಲ ಎಂದು ಕಿಡಿಕಾರಿದರು.

ಘಟನೆಗೆ ಕಾರಣರಾದ  ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಎತ್ತಂಗಡಿ ಮಾಡಬೇಕೆಂದು ಒತ್ತಾಯಿಸಿದ ಕಾರ್ಯಕರ್ತರು ನೀವು ನಮ್ಮ ಕಷ್ಟಗಳನ್ನು ಆಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕರ್ತರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಜಯಮಾಲಾ ಸಮಜಾಯಿಷಿ ನೀಡಲು ಮುಂದಾದರೂ ಅವರ ಆಕ್ರೋಶ ಮಾತ್ರ ತಣ್ಣಗಾಗಲಿಲ್ಲ. ಇದಕ್ಕೆ ಕೋಪಗೊಂಡ ಸಚಿವೆ ಮಾಧ್ಯಮದವರನ್ನು ಮುಂದಿಟ್ಟುಕೊಂಡು ಹದರಿಸಲು ಬರಬೇಡಿ, ನನಗೂ ತುಂಬಾ ಕೋಪ ಬರುತ್ತೆ ಎಂದು ಕಾರಿನಲ್ಲಿ ಪ್ರಯಾಣ ಬೆಳಸಿದರು.

Follow Us:
Download App:
  • android
  • ios