'ವಿಧಾನ ಪರಿಷತ್ ಕೋಲಾಹಲಕ್ಕೆ ಬಿಜೆಪಿ ಅಧಿಕಾರ ದಾಹವೇ ಕಾರಣ'
ಬಿಜೆಪಿ ರಾಜ್ಯದಲ್ಲಿ ಸಂವಿಧಾನ ವಿರೋಧಿ ಗೋ ಹತ್ಯೆ ನಿಷೇಧ ಹಾಗೂ ಲವ್‌ಜಿಹಾದ್ ಮಸೂದೆಗಳನ್ನು ಅಂಗೀಕರಿಸಲು ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಕಾರಣ ಈ ರೀತಿ ಅಡ್ಡ ದಾರಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ರಾಜ್ಯ ವಕ್ತಾರ ಡಿ.ಬಸವರಾಜ
ದಾವಣಗೆರೆ(ಡಿ.21): ವಿಧಾನ ಪರಿಷತ್‌ನಲ್ಲಿ ಇತ್ತೀಚೆಗೆ ನಡೆದ ಗಲಾಟೆ, ಗದ್ದಲ, ಕೋಲಾಹಲಕ್ಕೆ ಬಿಜೆಪಿಯ ಅಧಿಕಾರದಾಹವೇ ಕಾರಣವೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ಡಿ.ಬಸವರಾಜ ಆರೋಪಿಸಿದರು.
ಪರಿಷತ್ ಘಟನೆ ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪುಚುಕ್ಕೆಯಾಗಿದೆ. ಅಂದಿನ ಕಲಾಪದ ಬೆಲ್ ಆಗುತ್ತಿರುವಾಗ, ಸಭಾಪತಿಗಳು ಪೀಠಕ್ಕೆ ಬಾರದಂತೆ ತಡೆಯಲು ಬಾಗಿಲಿಗೆ ಬೀಗ ಹಾಕಿದ್ದ ಬಿಜೆಪಿ ಸಭಾಪತಿ ತಡೆಯಲು ನಿರ್ಧರಿಸಿದ್ದ ಬಿಜೆಪಿಯವರು ಸಭಾಪತಿ ಅವರ ಅನುಮತಿ ಇಲ್ಲದೇ ಉಪಸಭಾಪತಿ ಅವರನ್ನು ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡುಹಗಲೇ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಈ ಕೋಲಾಹಲಕ್ಕೆ ಬಿಜೆಪಿ ನೇರವಾಗಿ ಕಾರಣವಾಗಿದ್ದರೂ ಸಹ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬಿಜೆಪಿಯ ಸಚಿವರು ಅಂದಿನ ಘಟನೆ ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ.
'ರೇಣುಕಾಚಾರ್ಯ ಒಬ್ಬ ಡೋಂಗಿ ರಾಜಕಾರಣಿ, ಎಲ್ಲಾದ್ರೂ ಸಿಕ್ರೆ ಮುಖಕ್ಕೆ ಮಸಿ ಬಳಿಯುತ್ತೇವೆ'
ಉಪಮುಖ್ಯಮಂತ್ರಿ ಅಶ್ವಥ್‌ನಾರಾಯಣ, ಕಾನೂನು ಸಚಿವ ಮಾಧುಸ್ವಾಮಿ ಅವರು ಅಕ್ರಮವಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯನ್ನು ಕುರಿಸಿ ಈ ಘಟನೆಗೆ ನೇರ ಕಾರಣವಾಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸಂವಿಧಾನ ವಿರೋಧಿ ಗೋ ಹತ್ಯೆ ನಿಷೇಧ ಹಾಗೂ ಲವ್‌ಜಿಹಾದ್ ಮಸೂದೆಗಳನ್ನು ಅಂಗೀಕರಿಸಲು ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಕಾರಣ ಈ ರೀತಿ ಅಡ್ಡ ದಾರಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಘಟನೆಯಲ್ಲಿ ಅಪರಾಧಿ ಸ್ಥಾನದಲ್ಲಿರುವ ಬಿಜೆಪಿಯವರು ತಮ್ಮ ಪಕ್ಷದ ರಾಜ್ಯಪಾಲರಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.