'ಕಾಂಗ್ರೆಸ್ ಪ್ರತಿಭಟಿಸೋದು ನೆರೆ ಸಂತ್ರಸ್ತರಿಗಾಗಿ ಅಲ್ಲ, ತನ್ನ ಅಸ್ತಿತ್ವಕ್ಕಾಗಿ'

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬಿ. ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನೆರೆ ಸಂತ್ರಸ್ತರಿಗಾಗಿ ಅಲ್ಲ, ತನ್ನ ಅಸ್ತಿತ್ವಕ್ಕಾಗಿ ಪ್ರತಿಭಟಿಸ್ತಿದೆ ಎಂದಿದ್ದಾರೆ.

 

Congress protesting not for flood victims but for itself says bs yediyurappa

ಚಿಕ್ಕಮಗಳೂರು(ಸೆ.13): ನೆರೆ ಸಂತ್ರಸ್ತರಿಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿದೆ. ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಶೃಂಗೇರಿಯ ಶಾರದ ಪೀಠಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷ ಯಾವಾಗಲೂ ಚಟುವಟಿಕೆಯಿಂದ ಇರಬೇಕು ಎಂದು ತಿಳಿಸಿದರು.

ವಿನಯ್ ಗುರೂಜಿ ಗೌರಿಗದ್ದೆಗೆ ಹೊರಟ BSY, ಶೃಂಗೇರಿಗೂ ಭೇಟಿ

ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರೀ ಹಾನಿ ಸಂಭವಿಸಿದೆ. ಹಲವು ಮಂದಿ ಮನೆ, ಜಮೀನು ಕಳೆದುಕೊಂಡಿದ್ದಾರೆ. ಅವರ ಕಷ್ಟನೋಡಿದ್ದೇವೆ. ಮನೆ ಕಳೆದುಕೊಂಡವರು ಮತ್ತೆ ಮನೆಯನ್ನು ಕಟ್ಟಿಕೊಳ್ಳಲು .5 ಲಕ್ಷ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಆದೇಶ ಇಂದೇ ಹೊರಬೀಳಲಿದೆ ಎಂದರು.

.5 ಲಕ್ಷದಲ್ಲಿ ಮನೆಯ ಫೌಂಡೇಷನ್‌ ಕಟ್ಟಲು ತಕ್ಷಣ .1 ಲಕ್ಷ ನೀಡಲಾಗುವುದು. ಇನ್ನುಳಿದ ಹಣವನ್ನು ಹಂತ ಹಂತವಾಗಿ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಭಾಗದಲ್ಲಿ ಕಾಫಿ ಸೇರಿದಂತೆ ಇತರೆ ಬೆಳೆಗಳಿಗೆ ಮಳೆಯಿಂದ ಹಾನಿ ಸಂಭವಿಸಿದೆ. ಬೆಳೆ ನಷ್ಟದ ಸರ್ವೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ತಕ್ಷಣ ಗರಿಷ್ಠ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

DJ ಹಾಡಿಗೆ ಸಿ.ಟಿ. ರವಿ ಭರ್ಜರಿ ಡ್ಯಾನ್ಸ್; ಸಚಿವರ ನೋಡಿ ಹುಚ್ಚೆದ್ದು ಕುಣಿದ್ರು ಫ್ಯಾನ್ಸ್!

ಕೇಂದ್ರ ಸರ್ಕಾರ, ನಮ್ಮ ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ನೆರವು ನೀಡಲು ಸ್ಪಂದಿಸಿದೆ. ಈ ಸಂಬಂಧ ಈಗಾಗಲೇ ಕೇಂದ್ರದ ಅಧ್ಯಯನ ತಂಡಗಳು ದೇಶದ ಏಳೆಂಟು ರಾಜ್ಯಗಳಿಗೆ ಭೇಟಿ ನೀಡಿ ಕೇಂದ್ರಕ್ಕೆ ವರದಿ ನೀಡಿವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios