*  ಮೇಕೆದಾಟು ಹೋರಾಟಕ್ಕೆ ತೊಂದರೆ ನೀಡಲ್ಲೆಂದೇ ವೀಕೆಂಡ್‌ ಕರ್ಫ್ಯೂ ಜಾರಿ*  ಸಚಿವ ಸಂಪುಟದ ಸಹೋದ್ಯೋಗಿಗಳ ನಡುವೆ ಯಾರಿಗೂ ಪರಸ್ಪರ ಹೊಂದಾಣಿಕೆ ಇಲ್ಲ*  ಪಾಠ ಕಲಿಸಲು ಜನರು ಸಜ್ಜಾಗುತ್ತಿದ್ದಾರೆ 

ಬೆಂಗಳೂರು(ಜ.29): ಕೊರೋನಾ(Coronavirus) ವಿಚಾರದಲ್ಲಿ ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್‌ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಜನರ ಜತೆ ಆಟವಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್‌(DK Suresh) ಆರೋಪಿಸಿದ್ದಾರೆ.

ಕಾಂಗ್ರೆಸ್‌(Congress) ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಅವರ ಜನ್ಮದಿನದ ಅಂಗವಾಗಿ ರಾಜರಾಜೇಶ್ವರಿನಗರ ಕಾಂಗ್ರೆಸ್‌ ಕಾರ್ಯಕರ್ತರು ಬಾಲಕೃಷ್ಣ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೊರೋನಾಗಾಗಿ ಉಚಿತ ಬೂಸ್ಟರ್‌ ಡೋಸ್‌, ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ವಿತರಣೆ, ಆರೋಗ್ಯ ತಪಾಸಣೆ, ನೇತ್ರದಾನ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

Mekedatu Padayatra:'ಸುರೇಶ್‌ ತಳ್ಳಿದರೆ ಏನಂತೆ, ನಾನೆ ನಿನ್ನ ಹೆಗಲ ಮೇಲೆ ಕೈಹಾಕುವೆ' ಡಿಕೆಶಿ ಅಭಯ

ಇದು ಬಿಜೆಪಿ(BJP) ಪಕ್ಷದ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್‌ ಎಂದು ಈ ಹಿಂದೆಯೇ ಸ್ಪಷ್ಟವಾಗಿ ಹೇಳಲಾಗಿತ್ತು. ಮೇಕೆದಾಟು ಹೋರಾಟಕ್ಕೆ ತೊಂದರೆ ನೀಡುವುದಕ್ಕಾಗಿಯೇ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿದ್ದರು. ಒಂದು ಸಾವಿರ ಪ್ರಕರಣಗಳಿದ್ದ ಸಂದರ್ಭದಲ್ಲಿ ಲಾಕ್‌ಡೌನ್‌(Lockdown) ಮಾಡಿದ್ದ ಸರ್ಕಾರ 50 ಸಾವಿರ ಪ್ರಕರಣಗಳಿದ್ದ ವೇಳೆ ಲಾಕ್‌ಡೌನ್‌ ತೆರವುಗೊಳಿಸಿತ್ತು. ಆ ಮೂಲಕ ಸರ್ಕಾರ ಮತ್ತು ಅ​ಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.

ಲಾಕ್‌ಡೌನ್‌ ಮಾಡಿದರೆ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಸಚಿವರು, ಅಧಿ​ಕಾರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳ ನಡುವೆ ಯಾರಿಗೂ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೆಲ್ಲವನ್ನೂ ಜನ ಗಮನಿಸುತ್ತಿದ್ದು, ಪಾಠ ಕಲಿಸಲು ಸಜ್ಜಾಗುತ್ತಿದ್ದಾರೆ ಎಂದು ಸುರೇಶ್‌ ತಿಳಿಸಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಮಾತನಾಡಿ, ಕೊರೋನಾ ಮಹಾಮಾರಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಆದರೆ, ಸರ್ಕಾರ ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಕಾಂಗ್ರಸ್‌ ಪಕ್ಷ ಮತ್ತು ಅಭಿಮಾನಿಗಳಿಂದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌(Booster Dose) ಮತ್ತು ಇತರರಿಗೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ನೀಡಲು ಮುಂದಾಗಿದ್ದೇವೆ ಎಂದರು.

ಡಿಕೆ ಸೋದರರ ಜೊತೆ ಒಳ ಒಪ್ಪಂದ : ಬಿಜೆಪಿ ಬಿಡುವ ವಿಚಾರಕ್ಕೂ ಉತ್ತರ

ಚನ್ನಪಟ್ಟಣ: ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ನನ್ನ ನಡುವೆ ಆರಂಭದಿಂದಲೂ ಕಿತ್ತಾಟ ಇದೆ. ನಾನು ಎಂದೂ ಡಿಕೆಎಸ್‌ ಸಹೋದರರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಹೋಗುವುದು ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತದೆ ಎಂದು ಎಂಎಲ್ಸಿ ಯೋಗೇಶ್ವರ್‌ (CP Yogeshwar) ವ್ಯಂಗ್ಯವಾಡಿದ್ದರು.

Congress Padayatra ಪಾದಯಾತ್ರೆ ನಿಲ್ಲಿಸಲು ಸರ್ಕಾರ ಆದೇಶ, ಡಿಕೆಶಿ ಮೌನ, ಅಬ್ಬರಿಸಿದ ಡಿಕೆ ಸುರೇಶ್

ಜ.06 ರಂದು ಮಾತನಾಡಿದ್ದ ಅವರು, 1999 ರಲ್ಲಿ ನಾನು ಮೊದಲ ಬಾರಿಗೆ ಕಾಂಗ್ರೆಸ್‌ (Congress) ಪಕ್ಷದಿಂದ ಟಿಕೇಟ್‌ ಕೇಳಿದಾಗ ಇದೇ ಡಿ.ಕೆ.ಶಿವಕುಮಾರ್‌ ಟಿಕೆಟ್‌ (Ticket) ತಪ್ಪಿಸಿದರು. ಬಿಜೆಪಿ ಸೇರಿದ ನಾನು 2013ರಲ್ಲಿ ಬಿಜೆಪಿ (BJP) ಮೂರು ಭಾಗವಾದಾಗ ನನ್ನ ಅಸ್ತಿತ್ವಕ್ಕಾಗಿ ಮತ್ತೆ ಕಾಂಗ್ರೆಸ್‌ಗೆ ಬಂದೆ. ಆಗಲೂ ಇದೇ ಡಿ.ಕೆ.ಶಿವಕುಮಾರ್‌ ಟಿಕೆಟ್‌ ತಪ್ಪಿಸಿದರು. ಕಳೆದ 25 ವರ್ಷಗಳಿಂದ ನನಗೆ ಕಿರುಕುಳ ಕೊಟ್ಟು ಕೊಂಡು ಬಂದಿದ್ದಾರೆ. ಅವರ ಜೊತೆಗೆ ನಾನು ಹೇಗೆ ಹೋಗಲಿ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ವರಿಷ್ಠರು ಸೂಚಿಸಿದರೆ ಕನಕಪುರದಿಂದ (kanakapura) ಸ್ಪರ್ಧಿಸಲು ಸಿದ್ಧ ಎಂದರು.

ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ (DK Suresh) ಮತ್ತು ಎಂಎಲ್‌ಸಿ ರವಿ ಅವರ ವರ್ತನೆಯಿಂದಾಗಿ ಇಡೀ ಜಿಲ್ಲೆಯ ಜನತೆಗೆ ಅಪಮಾನವಾಗಿದ್ದು, ಅವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.